Advertisement

ಮುತ್ತಪ್ಪ ರೋಣದಗೆ ಜಾನಪದ ಅಕಾಡೆಮಿ ಪ್ರಶಸ್ತಿ

03:01 PM Jan 06, 2021 | Team Udayavani |

ಲಕ್ಷ್ಮೇಶ್ವರ: ತಾಲೂಕಿನ ಬಾಲೇಹೊಸೂರ ಗ್ರಾಮದ ಮುತ್ತಪ್ಪ ರೇವಣಪ್ಪ ರೋಣದಅವರ ಪುರವಂತಿಕೆಯ ಕಲಾ ಪ್ರತಿಭೆಗೆ2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

Advertisement

ಕಲೆ ಯಾರ ಸ್ವತ್ತೂ ಅಲ್ಲ ಅದು ಕಲಾವಿದನಸ್ವತ್ತು. ನಿಜವಾದ ಕಲಾವಿದನಿಗೆ ಸಮಾಜದಲ್ಲಿಬೆಲೆ ಇದೆ ಎಂಬುದಕ್ಕೆ ಗ್ರಾಮೀಣಕಲಾವಿದ ಮುತ್ತಪ್ಪ ಸಾಕ್ಷಿಯಾಗಿದ್ದಾರೆ. ಕೃಷಿಕುಟುಂಬದವರಾದ ಇವರು ಪುರವಂತಿಕೆ ಕಲೆ ರೂಢಿಸಿಕೊಂಡಿದ್ದಾರೆ.

ಕೆಂಪು, ಹಸಿರು, ಹಳದಿ ಬಣ್ಣದ ಪಂಚೆ,ಜುಬ್ಬ, ತಲೆಗೆ ಪೇಟ, ಬಲಗೈಯಲ್ಲಿ ಖಡ್ಗ,ಬೆಳ್ಳಿಯ ಗಗ್ಗರ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ವೀರಾವೇಷದಿಂದ ವೀರಭದ್ರ ದೇವರಒಡಪು ಹೇಳುವ ಕಲೆ ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ಸಂಪ್ರದಾಯದಲ್ಲಿಕಂಡು ಬರುತ್ತದೆ.

ಪರಂಪರಾಗತವಾಗಿ ಬಂದಿರುವ ಈ ಕಲೆಯನ್ನು ಮುತ್ತಪ್ಪನವರು 8 ವರ್ಷ ವಯಸ್ಸಿನವರಿರುವಾಗಲೇ ವೀರಭದ್ರದೇವರ ಜನನ, ಪ್ರವಾಡಗಳು, ರಾಕ್ಷಸ ಸಂಹಾರ, ಶಿವನ ಅವತಾರಗಳ ಬಗ್ಗೆ ಎಲ್ಲರೂ ಮೂಕಪ್ರೇಕ್ಷಕರಾಗುವಂತೆ ಕೆನ್ನೆ, ತುಟಿ, ನಾಲಿಗೆ, ರೆಪ್ಪೆ, ಹೊಟ್ಟೆಯಲ್ಲಿ ಶಸ್ತ್ರ ಧರಿಸಿಕೊಂಡುಪುರವಂತಿಕೆ ಮಾಡುವ ಇವರು ಎಲ್ಲನ್ನು ರೋಮಾಂಚನಗೊಳಿಸುತ್ತಾರೆ.

ಚಿಕ್ಕವರಿದ್ದಾಗಲೇ ಗುಗ್ಗಳ ಮದುವೆ,ಜಾತ್ರೆ, ಗೃಹ ಪ್ರವೇಶ, ದೇವರ ಕಾರ್ಯ,ಉತ್ಸವ, ಹಬ್ಬ ಹರಿದಿನಗಳಲ್ಲಿ ತಮ್ಮದೇಆದ ವಿಶೇಷ ಧ್ವನಿ, ಅಭಿನಯದ ಮೂಲಕಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರವಿಶೇಷ ಕಲೆಯಿಂದಾಗಿ ಗದಗ ಜಿಲ್ಲೆ ಅಷ್ಟೇಅಲ್ಲದೇ ಹಾವೇರಿ, ಧಾರವಾಡ, ದಾವಣಗೆರೆ,ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ.

Advertisement

ಕೃಷಿಯೊಂದಿಗೆ ತಮ್ಮಲ್ಲಿನ ಕಲೆಯನ್ನು ಅವಕಾಶ ಸಿಕ್ಕಾಗೆಲ್ಲ ಪ್ರದರ್ಶಿಸುತ್ತಾಆಸಕ್ತರಿಗೆ ಹೇಳಿಕೊಡುತ್ತಾ ಬಂದಿರುವಈ ಬಡ ಕಲಾವಿದರಿಗೆ ಆಗಾಗ್ಗೆಸಣ್ಣಪುಟ್ಟ ಸನ್ಮಾನ ಮಾಡಿದ್ದಾರೆ.ಇದುವರೆಗೂ ಯಾವುದೇ ಕಲಾವಿದರಮಾಸಾಶನವಾಗಲಿ ಮತ್ತು ಇತರೆ ಯಾವುದೇಸಹಾಯ- ಸಹಕಾರವಾಗಲಿ ಲಭಿಸಿಲ್ಲ.ಆದರೆ ಇದೀಗ ಎಲೆ ಮರೆಯ ಕಾಯಿಯಂತೆಗ್ರಾಮೀಣ ಪ್ರದೇಶದಲ್ಲಿರುವ ಬಡ ಕಲಾವಿದಮುತ್ತಪ್ಪ ರೋಣದ ಅವರಿಗೆ ಜಾನಪದಅಕಾಡೆಮಿ ಪ್ರಶಸ್ತಿ ನೀಡುತ್ತಿರುವುದು ಕುಟುಂಬ ಮತ್ತು ಗ್ರಾಮಸ್ಥರಿಗೆ ಸಂತಸ ತಂದಿದೆ.

ನನ್ನಲ್ಲಿನ ಪುರವಂತಿಕೆ ಕಲೆ ಮೆಚ್ಚಿ ರಾಜ್ಯಮಟ್ಟದ ಪ್ರಶಸ್ತಿನೀಡುತ್ತಿರುವುದು ಸಂತಸತಂದಿದೆ. ಪುರವಂತಿಕೆ ಕಲೆಸಮಾಜದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಮತ್ತು ಸಮಾಜವನ್ನು ಸನ್ಮಾರ್ಗಕ್ಕೆ ಕೊಂಡೊಯುವ ಶ್ರೇಷ್ಠ ಕಲೆಯಾಗಿದೆ. – ಮುತ್ತಪ್ಪ ರೋಣದ, ಕಲಾವಿದ

ಗ್ರಾಮೀಣ ಬದುಕಿನ ಅನಕ್ಷರಸ್ಥರು, ರೈತರು, ಕೂಲಿಕಾರರ ಬದುಕಿನಲ್ಲಿ ಪರಂಪರಾಗತವಾಗಿಮೇಳೈಸಿರುವ ಜಾನಪದ ಕಲೆಗಳು ಇವತ್ತಿನ ವಿಜ್ಞಾನದ ಯುಗದಲ್ಲಿ ತೆರೆಮರೆಗೆ ಸರಿಯುತ್ತಿವೆ.ಇಂತಹ ಪರಿಸ್ಥಿತಿಯಲ್ಲಿಯೂ ನಮ್ಮೂರಿನ ಹಿರಿಯಕಲಾವಿದ ಮುತ್ತಪ್ಪ ರೋಣದ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಗ್ರಾಮಕ್ಕೆ ಹೆಮ್ಮೆ ಸಂಗತಿಯಾಗಿದೆ. ಸರ್ಕಾರ ಗ್ರಾಮೀಣ ಭಾಗದ ಇಂತಹ ಅನೇಕ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಲು ಮುಂದಾಗಬೇಕು.  -ದಿಂಗಾಲೇಶ್ವರ ಶ್ರೀ, ಬಾಲೆಹೊಸೂರ

Advertisement

Udayavani is now on Telegram. Click here to join our channel and stay updated with the latest news.

Next