Advertisement

ಎಂ.ಸಿ.ಭೋಗಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

05:09 PM Jan 06, 2021 | Team Udayavani |

ಚಿಕ್ಕಮಗಳೂರು: ರಾಜ್ಯೋತ್ಸವ ಮೂರು ಪ್ರಶಸ್ತಿಗಳನ್ನುಮುಡಿಗೇರಿಸಿಕೊಂಡ ಕಾಫಿನಾಡುಈಗ ಮತ್ತೂಂದು ಪ್ರಶಸ್ತಿಯನ್ನುತನ್ನ ಮುಡಿಗೇರಿಸಿಕೊಂಡಿದೆ. 2020-21ನೇ ಸಾಲಿಗೆ ಕೊಡಮಾಡುವ ಜಾನಪದ ಅಕಾಡೆಮಿಪ್ರಶಸ್ತಿಗೆ ಜಿಲ್ಲೆಯ ಅಜ್ಜಂಪುರ ತಾಲೂಕುಚೌಳಿ ಹಿರಿಯೂರು ಗ್ರಾಮದ ಚೌಡಿಕೆಪದ ಕಲಾವಿದ ಎಂ.ಸಿ.ಭೋಗಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಗೋಗತಿ ಅವರು ಆರು ಮಂದಿಮಹಿಳೆಯರು ಸೇರಿದಂತೆ 31 ವಿವಿಧಜಿಲ್ಲೆಯ ಕಲಾವಿದರು ಹಾಗೂ ಜಾನಪದತಜ್ಞರನ್ನು ಆಯ್ಕೆ ಮಾಡಿದ್ದು, ಅವರಲ್ಲಿಜಿಲ್ಲೆಯ ಚೌಡಿಕೆ ಪದ ಕಲಾವಿದ ಎಂ.ಸಿ.ಭೋಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.ಎಂ.ಸಿ. ಭೋಗಪ್ಪ ಅವರ 20 ವರ್ಷಗಳಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, 2021ರ ಫೆಬ್ರವರಿ ತಿಂಗಳಮೊದಲ ವಾರದಲ್ಲಿ ಚಾಮರಾಜನಗರಜಿಲ್ಲೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಎಂ.ಸಿ. ಭೋಗಪ್ಪ ಅವರು ಅಜ್ಜಂಪುರತಾಲೂಕು ಚೌಳಿಹಿರಿಯೂರು ಗ್ರಾಮದ ಮೂಡಬಾಗಿಲುಚನ್ನಪ್ಪ ಮತ್ತು ಲಕ್ಕಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಎರಡನೇಮಗನಾಗಿ 1952 ಅ.8ರಂದು ಜನಿಸಿದರು.

ತನ್ನ ಆರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರು ತಾಯಿಯಆಶ್ರಯದಲ್ಲಿ ಬೆಳೆದರು. ಗ್ರಾಮದಭೋಗನಂಜುಂಡೇಶ್ವರ ಭಜನಾಮಂಡಳಿಯಲ್ಲಿ ಜಾನಪದ ಹಾಡುಗಾರಿಕೆಕಲಿತೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಚೌಳಿಹಿರಿಯೂರು ಗ್ರಾಮದ ವನಬೋಗಿಹಳ್ಳಿ ದೇವಣ್ಣ ಮತ್ತುಮೆಣಸಿನಕಾಯಿ ಹೊಸಳ್ಳಿಯ ಸಿದ್ರಾಮಣ್ಣಅವರು ಆಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುನೀಡುತ್ತಿದ್ದರು. ಗ್ರಾಮದ ಹಿರಿಯರಾದ ಚೇರ್ಮೇನ್‌ ಸಿದ್ಧಪ್ಪ ಅವರು ಬೇರೆ ಊರಿನಿಂದ ನಮ್ಮೂರಿಗೆ ಬಂದು ಕಾರ್ಯಕ್ರಮ ನೀಡುತ್ತಾರೆ. ಆ ವೇಳೆ ಚೆನ್ನಾಗಿ ಹಾಡು ಹೇಳುವ ನೀವು ಏಕೆ ಹಾಡುಗಾರಿಕೆ ಯನ್ನು ಕಲಿತು ಕಾರ್ಯಕ್ರಮ ನೀಡಬಾರದೆಂದು ಬೆನ್ನು ತಟ್ಟಿ ಹುರಿದುಂಬಿಸಿದ್ದರು ಎಂದರು.

ಅವರು ಮಾತನ್ನು ಮನಸ್ಸಿಗೆ ತಗೆದುಕೊಂಡ ಭೋಗಪ್ಪ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತ ಇರುವ ಹಾಸ್ಯಪಾತ್ರಗಳನ್ನು ಮಾಡುತ್ತಾ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಮದುವೆಯ ಸೋಬಾನೆ ಪದ, ತೊಟ್ಟಿಲುಶಾಸ್ತ್ರ, ಹೆಣ್ಣುಮಕ್ಕಳು ತವರಿಗೆ ಹೋಗುವ ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಿದ್ದೆ. ವರ್ಷಗಟ್ಟಲೆ ಹಾಡುಗಳನ್ನುಅಬ್ಯಾಸ ಮಾಡುತ್ತಿದ್ದೆ ಎನ್ನುತ್ತಾರೆ ಭೋಗಪ್ಪ. ದಿನ ಕಳೆದಂತೆ ನನ್ನ ಹಾಡುಗಳುಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿತು. ಗೌರಿ- ಗಣೇಶ ಹಬ್ಬದಲ್ಲಿ

Advertisement

21 ದಿನ ಕಾರ್ಯಕ್ರಮ ನೀಡುತ್ತಿದ್ದೆ. ಚಿತ್ರದುರ್ಗ, ಹಾಸನ, ಚನ್ನರಾಯಪಟ್ಟಣ,ಬಾಣಾವರ ಸೇರಿದಂತೆ ತರೀಕೆರೆ ಸುತ್ತಮುತ್ತಲ ಹಳ್ಳಿಗಳಲ್ಲಿ ನನ್ನ ಚೌಡಿಕೆಪದ ಕೇಳಲುಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮಆಯೋಜಿಸುತ್ತಿದ್ದರು ಎಂದು ಆ ದಿನಗಳನ್ನು ನೆನೆದರು.

ಚೌಡಿಕೆಪದ ಕಾರ್ಯಕ್ರಮದ ಜೊತೆ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಳ್ಳುತ್ತಿದ್ದೆ.ಈ ನಡುವೆ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ತೆರಳಿ ಕಾರ್ಖಾನೆಯೊಂದರಲ್ಲಿಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಪಡೆಯುತ್ತಿದ್ದಅಲ್ಪಸ್ವಲ್ಪ ಹಣದಲ್ಲೇ ತನ್ನ ಇಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದೆ ಎಂದರು.

ಚೌಡಿಕೆಪದ ಒಂದು ಕಾರ್ಯಕ್ರಮಕ್ಕೆ ಆ ದಿನಗಳಲ್ಲಿ 25ರೂ. ನೀಡುತ್ತಿದ್ದೆ. ಹೆಚ್ಚುಎಂದರೆ 2 ಸಾವಿರ ರೂ. ಪಡೆಯುತ್ತಿದ್ದೆ.ಈಗ ಕೆಲವು ಕಲಾವಿದರು 5ರಿಂದ 10 ಸಾವಿರ ರೂ. ಪಡೆದುಕೊಳ್ಳುತ್ತಾರೆ ಎಂದುಅವರು ಬೆಳೆದು ಬಂದ ದಾರಿಯನ್ನುನೆನೆದುಕೊಂಡರು. ನನ್ನ ಕಲಾಸೇವೆಯನ್ನುಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿನೀಡಿ ಸನ್ಮಾನಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದರು.

ಆಧುನಿಕ ಕಾಲದಲ್ಲಿ ಜಾನಪದಕಲೆ ಮರೆಯಾಗುತ್ತಿದೆ. 50, 60ಸಾವಿರ ರೂ. ನೀಡಿ ಆರ್ಕೆಸ್ಟ್ರಾ ನಡೆಸಿದರೆಜನರು ಸೇರುತ್ತಾರೆ. ಜಾನಪದ ಕಾರ್ಯಕ್ರಮವನ್ನು ಅಸಡ್ಡೆಯಿಂದನೋಡುತ್ತಾರೆ. ಹರ್ಷದ ಕೂಳಿಗೆ ವರ್ಷದಕೂಳು ಕಳೆದುಕೊಂಡಂತಾಗಿದೆ ನಮ್ಮಇಂದಿನ ಪೀಳಿಗೆ. -ಎಂ.ಸಿ. ಭೋಗಪ್ಪ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

Advertisement

Udayavani is now on Telegram. Click here to join our channel and stay updated with the latest news.

Next