Advertisement
ಉಡುಪಿಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿ ರುವ ಜಾನಪದ ಪ್ರಕಾರಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
Related Articles
Advertisement
ರುಕ್ಮಿಣಿ ಮಲ್ಲಪ್ಪ ಹರನಾಳ ಜನಮಖಂಡಿ, ಬಾಗಲಕೋಟೆ (ಮದುವೆ ಹಾಡು), ಮಲ್ಲಯ್ಯ ರಾಚಯ್ಯ ತೋಟಗಂಟೆ, ಧಾರವಾಡ (ಜಾನಪದ ಸಂಗೀತ), ಹನುಮಂತಪ್ಪ ಚಿಕ್ಕಲಿಂಗದಹಳ್ಳಿ, ಹಾವೇರಿ(ಭಜನೆ ಕೋಲಾಟ), ನಾಗರಾಜ ನಿ. ಜಕ್ಕಮ್ಮನವರ್ ನಿಲಗುಂದ, ಗದಗ (ಗೀಗೀಪದ), ನಿಂಬೆವ್ವ ಕೆಂಚಪ್ಪಗುಬ್ಬಿ, ಇಂಗಳೇಶ್ವರ, ವಿಜಯಪುರ (ಸೋಬಾನೆ ಪದ), ಹುಸೇನಾಬಿ ಬುಡೇನ್‌ಸಾಬ್ ಹಳಿಯಾಳ, ಉತ್ತರಕನ್ನಡ (ಸಿದ್ಧಿ ಢಮಾಮಿ ನೃತ್ಯ), ಗಂಗಾಧರಯ್ಯ ಸ್ವಾಮಿ ಅಗ್ಗಿಮಠ ಮಕ್ತಾಂಪುರ ಕಲಬುರುಗಿ (ಪುರುವಂತಿಕೆ),
ತುಳಸಿರಾಮ ಭೀಮರಾವ ಸುತಾರ, ಭಾಲ್ಕಿ, ಬೀದರ(ಆಲದ ಎಳೆಯಿಂದ ಸಂಗೀತ), ಶಾಂತವ್ವ ಲಚಮಪ್ಪ ಲಮಾಣಿ, ಗೋಲೇಕೊಪ್ಪ ಕೊಪ್ಪಳ (ಲಂಬಾಣಿ ನೃತ್ಯ), ಸೂಗಪ್ಪ ನಾಗಪ್ಪ ದೇವಸುಗೂರು, ರಾಯಚೂರು (ತತ್ವಪದ), ವೇಷಗಾರ ಮೋತಿ ರಾಮಣ್ಣ, ಹರಪನಹಳ್ಳಿ, ಬಳ್ಳಾರಿ (ಹಗಲುವೇಷ), ಶಿವಮೂರ್ತಿ, ತನೀಕೆದಾರ ಪೇಟೆ, ಅಮ್ಮಾಪುರ, ಯಾದಗಿರಿ (ಗೀಗೀಪದ). ಜಾನಪದ ತಜ್ಞ; ಡಾ. ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿ: ಡಾ. ಚಕ್ಕರೆ ಶಿವಶಂಕರ್ ರಾಮನಗರ.
ಡಾ. ಬಿ.ಎಸ್. ಗದ್ದಿಗಿಮಠ ತಜ್ಞ ಪ್ರಶಸ್ತಿ: ಕಲಬುರಗಿ ಡಾ. ಬಸವರಾಜ ಪೊಲೀಸ್ ಪಾಟೀಲ್ ಆಯ್ಕೆಗೊಂಡಿದ್ದಾರೆ.
ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ಬುಧವಾರ 2019ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 48ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರ ಹೆಸರನ್ನು ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಲಿಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಕಲಬುರಗಿ ಜಿಲ್ಲೆಯ ವಾಡಿ ಪ್ರದೇಶದ ಹಿರಿಯ ಕಲಾವಿದ ಪ್ರಕಾಶ ಗಡ್ಕರ್, ದಾವಣಗೆರೆಯ ಬಿ.ಆರ್.ಕೊರ್ತಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿ.ಎಂ.ಹೆಗಡೆ ತಾರ ಗೋಡು ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ಎಂದರು. ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಹಾಗೆ ಯೇ 10 ಮಂದಿ ಕಲಾವಿದರನ್ನು 48ನೇ ವಾರ್ಷಿಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು ಇದು 25 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಮಾ. 21ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2019-20 ನೇ ಸಾಲಿನ 48ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು ಸ್ಪರ್ಧೆಗೆ ರಾಜ್ಯದ ವಿವಿಧಡೆಗಳಿಂದ 367 ಕಲಾವಿದರ 605 ಕಲಾಕೃತಿಗಳು ಮತ್ತು ಛಾಯಾಚಿತ್ರಗಳು ಸ್ವೀಕೃತವಾಗಿದ್ದವು. ಇದರಲ್ಲಿ 68 ಕಲಾಕೃತಿಗಳನ್ನು ಖುದ್ದಾಗಿ ಪರಾಮರ್ಶಿಸಿ ಅತ್ಯುತ್ತಮ 10 ಕಲಾಕೃತಿಗಳನ್ನು ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಮಾಹಿತಿ ನೀಡಿದರು. ಅಕಾಡೆಮಿ ಬಹುಮಾನಕ್ಕಾಗಿ ಕಲಾವಿದರಿಂದ 300 ರೂ. ಶುಲ್ಕವನ್ನು ಪಡೆಯಲಾಗುತ್ತದೆ. ಮತ್ತೆ ಹಿಂತಿರುಗಿಸುವ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಬಸವರಾಜ ಹೂಗಾರ್ ಉಪಸ್ಥಿತರಿದ್ದರು. ಆಯ್ಕೆಯಾದ ಕಲಾವಿದರು: ಓಂಕಾರ ಕಲ್ಲಪ್ಪ ಮೇತ್ರೆ (ಬೀದರ್ ), ತಿಪ್ಪಣ್ಣ ಎಸ್.ಪೂಜಾ (ಕಲಬು ರಗಿ), ಎಂ.ಎಸ್. ಲಿಂಗಾರಾಜು (ಚಿಕ್ಕಮಗಳೂರು), ವಿನಾಯಕ ರಾ.ಚಿಕ್ಕೋಡಿ (ಮಹಾಲಿಂಗಪೂರ), ಭರತ ಎಂ.ಲದ್ದಿಯವರ (ಧಾರವಾಡ), ಕೆ.ಎಸ್. ಬಸವರಾಜು (ತುಮಕೂರು), ಶಿವಕಾಂತ ಶೇಖರ (ಬೆಂಗಳೂರು), ವಿನಾಯಕ ಎನ್.ಹೊಸೂರ (ಬಾಗಲಕೋಟ), ವಿಜಯ ಎಸ್.ನಾಗವೇಕರ್ (ಬೆಂಗಳೂರು), ಗಣೇಶ್ ಪಿ.ದೊಡ್ಡಮನಿ (ಬೆಂಗಳೂರು).