ಕಾರ್ಕಳ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಜಾನೆ ದಟ್ಟ ಮಂಜು ಆವರಿಸುತ್ತಿದೆ. ಅದರಲ್ಲೂ ಇಂದು ಹೆಚ್ಚೇ ಎನ್ನುವಷ್ಷು ಮಂಜು ಆವರಿಸಿತ್ತು.
ಉಡುಪಿ ಜಿಲ್ಲೆಯ ಕಾರ್ಕಳ ನಗರದಾದ್ಯಂತ ಗುರುವಾರ ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಇದರಿಂದಾಗಿ ಕಾರ್ಕಳ ಮಂಜಿನ ನಗರಿಯಾಗಿತ್ತು!
ಇದನ್ನೂ ಓದಿ:ಸಿಮ್ ಹ್ಯಾಕ್ : ಮಣಿಪಾಲದವರ ನಂಬರ್ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್
ಸಮೀಪದಲ್ಲಿ ಇರುವವರೂ ಕಾಣಿಸದಷ್ಟು ರೀತಿಯಲ್ಲಿ ಮಂಜು ಸುರಿಯುತ್ತಿತ್ತು. ಇದರಿಂದಾಗಿ ಬೆಳಗ್ಗೆ ಎಂಟು ಗಂಟೆಯಾದರೂ ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿದ್ದುದು ಕಂಡು ಬಂತು. ತುಸು ಚಳಿಯ ವಾತಾವರಣ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!
ಮೋಡಗಳ ಮರೆಯಿಂದ ಮಂಜನ್ನು ಸೀಳಿಕೊಂಡು ಹೊರಬರಲು ಸೂರ್ಯನ ಕಿರಣಗಳು ತವಕಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಾಣಸಿಕ್ಕವು. ಇದು ನೋಡುಗರಿಗೆ ಮುದ ನೀಡಿತು. ಕ್ಯಾಮರದಲ್ಲಿ ಕೆಲವರು ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.