Advertisement
ಬ್ರಝಿಲ್ ತಂಡ ಮಂಗಳವಾರ ಬೆಳಗ್ಗೆ ಮುಂಬಯಿಗೆ ಆಗಮಿಸಿದ್ದು, ಸಂಜೆ ಅಂಧೇರಿಯ “ಮುಂಬೈ ಫುಟ್ಬಾಲ್ ಅರೆನಾ’ದಲ್ಲಿ ಅಭ್ಯಾಸ ಆರಂಭಿಸಿತು. ಅ. 28ರಂದು ಅಂಧೇರಿ ಕಾಂಪ್ಲೆಕ್ಸ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಬ್ರಝಿಲ್ ಅಭ್ಯಾಸ ಪಂದ್ಯವನ್ನು ಆಡಲಿದೆ.
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಟರ್ಕಿ ತಂಡ ಸೋಮವಾರ ರಾತ್ರಿಯೇ ಮುಂಬಯಿಗೆ ಬಂದಿದೆ. ಮಂಗಳವಾರ ಅದು ನವೀ ಮುಂಬಯಿಯಲ್ಲಿ ಅಭ್ಯಾಸ ನಡೆಸಿತು. ಟರ್ಕಿ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಪರಗ್ವೆ, ಮಾಲಿ ಮತ್ತು ನ್ಯೂಜಿಲ್ಯಾಂಡ್ ಈ ವಿಭಾಗದ ಇನ್ನಿತರ ತಂಡಗಳು. ಕೂಟದ ಉದ್ಘಾಟನಾ ದಿನದಂದೇ (ಅ. 6) ಟರ್ಕಿ ತಂಡ ನವೀ ಮುಂಬಯಿಯ “ಡಿ.ವೈ. ಪಾಟೀಲ್ ಸ್ಟೇಡಿಯಂ’ನಲ್ಲಿ ತನ್ನ ಮೊದಲ ಲೀಗ್ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.
Related Articles
ಕಿರಿಯರ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ಅ. 6ರಿಂದ ಮೊದಲ್ಗೊಂಡು ಅ. 28ರ ತನಕ 22 ದಿನಗಳ ಕಾಲ ನಡೆಯಲಿದೆ. ದೇಶದ 6 ತಾಣಗಳು ಕೂಟದ ಆತಿಥ್ಯ ವಹಿಸಲಿವೆ. ಇವುಗಳೆಂದರೆ ಹೊಸದಿಲ್ಲಿ, ನವೀ ಮುಂಬಯಿ, ಗೋವಾ, ಕೊಚ್ಚಿ, ಗುವಾಹಟಿ ಮತ್ತು ಕೋಲ್ಕತಾ. “ಎ’ ವಿಭಾಗದಲ್ಲಿರುವ ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಯುಎಸ್‌ಎ ವಿರುದ್ಧ ಅ. 6ರಂದು ಆಡಲಿದೆ.
Advertisement
20 ಸಾವಿರ ಟಿಕೆಟ್ ಮಾರಾಟವಿಶ್ವಕಪ್ ಫುಟ್ಬಾಲ್ ವೀಕ್ಷಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನವೀ ಮುಂಬಯಿಯಲ್ಲಿ ಮೊದಲ ದಿನ ನಡೆಯಲಿರುವ 2 ಪಂದ್ಯಗಳ 20 ಸಾವಿರ ಟಿಕೆಟ್ ಈಗಾಗಲೇ ಮಾರಾಟವಾಗಿದೆ. ಅಂದು “ಡಿ.ವೈ. ಪಾಟೀಲ್ ಸ್ಟೇಡಿಯಂ’ನಲ್ಲಿ ಭಾರತ- ಯುಎಸ್ ಮತ್ತು ಪರಗ್ವೆ-ಮಾಲಿ ನಡುವೆ ಪಂದ್ಯಗಳು ನಡೆಯಲಿವೆ. ಈ ಸ್ಟೇಡಿಯಂ 45 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಪಂದ್ಯಾ ವಳಿಯ ಆರಂಭಕ್ಕೆ ಇನ್ನೂ 10 ದಿನ ಇರುವುದರಿಂದ ಅಷ್ಟರಲ್ಲಿ ಟಿಕೆಟ್ “ಸೋಲ್ಡ್ ಔಟ್’ ಆದೀತೆಂಬ ನಿರೀಕ್ಷೆ ಸಂಘಟಕರದ್ದು. “ಡಿ.ವೈ. ಪಾಟೀಲ್ ಸ್ಟೇಡಿಯಂ’ನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ದಕ್ಷಿಣ ಕೊರಿಯಾದಿಂದ ತರಿಸಲಾದ ನೂತನ ಆಸನ ಹಾಗೂ ಛಾವಣಿಯನ್ನು ಅಳವಡಿಸಲಾಗಿದ್ದು, ಪ್ರತಿಯೊಬ್ಬರಿಗೂ ಪಂದ್ಯವನ್ನು ಸ್ಪಷ್ಟವಾಗಿ ವೀಕ್ಷಿಸುವ ಅವಕಾಶ ಲಭಿ ಸಲಿದೆ. ಸೆ. 28ರ ಬಳಿಕ ಯಾವುದೇ ಹೊತ್ತಿನಲ್ಲಿ ಈ ಕ್ರೀಡಾಂಗಣವನ್ನು ಫಿಫಾಗೆ ಹಸ್ತಾಂತರಿಸಲಾಗುವುದು. ಪಂದ್ಯಗಳ ದಿನದಂದು ಸ್ಟೇಡಿಯಂನಿಂದ ಹತ್ತಿರದ ರೈಲ್ವೇ ನಿಲ್ದಾಣಗಳಿಗೆ ಬಸ್ಸುಗಳ ವ್ಯವಸ್ಥೆ ಮಾಡಲು ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್ ಒಪ್ಪಿಗೆ ಸಲ್ಲಿಸಿದೆ.