ಮೂಡಲಗಿ: 11ದಿನಗಳ ಕಾಲ ನಡೆಯುವ ತಾಲೂಕಿನ ಯಾದವಾಡ ಗ್ರಾಮದ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ ಎತ್ತುಗಳ ತೆರಬಂಡಿ ಸ್ಪರ್ಧೆ ಜನರ ಗಮನ ಸೆಳೆಯಿತು.
ಸ್ಪರ್ಧೆಯಲ್ಲಿ ಸುಮಾರು 10 ಜೋಡು ಎತ್ತುಗಳು ಭಾಗವಹಿಸಿದವು. ಎತ್ತುಗಳ ತೆರಬಂಡಿ ಸ್ಪರ್ಧೆಗೆ ವಿಠuಲ ಸುಣಧೋಳಿ ಚಾಲನೆ ನೀಡಿದರು. ಈ ವೇಳೆ ರಮೇಶ ಸಾವಳಗಿ, ಹನಮಂತ ಹ್ಯಾಗಾಡಿ, ಸುನೀಲ ನ್ಯಾಮಗೌಡರ, ಹನಮಂತ ಚಿಕ್ಕನಗೌಡರ, ಗೋಪಾಲ ಕಾಗವಾಡ, ಮಲ್ಲಪ್ಪ ಮಾಳೇದ, ವೆಂಕಟೇಶ ಕೇರಿ, ಕೃಷ್ಣಾ ಕೇರಿ ಮತ್ತು ಬೀಲಕುಂದಿ ಮತ್ತಿತರರು ಇದ್ದರು.
Advertisement
ತೆರಬಂಡಿ ಸ್ಪರ್ಧೆಯಲ್ಲಿ ಇಂಗಳಗಿಯ ರೇಣುಕಾ ದೇವಿ ಪ್ರಸನ್ನ ಎತ್ತುಗಳು 688 ಮೀಟರ್ ಕ್ರಮಿಸಿ ಪ್ರಥಮ ಬಹುಮಾನ 50 ಸಾವಿರ ರೂ., ಮಂಜುನಾಥ ಪ್ರಸನ್ನ ಎತ್ತುಗಳು 684 ಮೀಟರ್ ಕ್ರಮಿಸಿ ದ್ವಿತೀಯ ಬಹುಮಾನ 40 ಸಾವಿರ ರೂ., ಕಮಲದಿನ್ನಿಯ ಮಾರುತೇಶ್ವರ ಪ್ರಸನ್ ಎತ್ತುಗಳು 683 ಕ್ರಮಿಸಿ ತೃತೀಯ ಬಹುಮಾನ 30 ಸಾವಿರ ರೂ., ವಡ್ಡೇರಹಟ್ಟಿಯ ರೇವಣಸಿದ್ದೇಶ್ವರ ಎತ್ತುಗಳು 650 ಮೀಟರ್ ಕ್ರಮಿಸಿ ನಾಲ್ಕನೇ ಬಹುಮಾನ 20 ಸಾವಿರ ರೂ., ನಂದಗಾವದ ವೀರಭದ್ರೇಶ್ವರ ಪ್ರಸನ್ನ ಎತ್ತುಗಳು 641 ಮೀಟರ್ ಕ್ರಮಿಸಿ ಐದನೇ ಬಹುಮಾನ ರೂ.10 ಸಾವಿರ ಪಡೆದುಕೊಂಡವು.