ಮುಂಬೈ : ಇತ್ತೀಚಿನ ಜನರಿಗೆ ರಸ್ತೆ ಬದಿಯ ಆಹಾರಗಳ ಮೇಲೆ ಜಾಸ್ತಿ ವ್ಯಾಮೋಹ ಬಂದಿದೆ. ಇನ್ನು ಫಾಸ್ಟ್ ಫುಡ್ ಸೆಂಟರ್ ಗಳ ಬಳಿ ಜನರು ಯಾವಾಗಲೂ ಇದ್ದೇ ಇರ್ತಾರೆ. ಬಾಯಲ್ಲಿ ನೀರು ತರಿಸುವ ತಿನಿಸುಗಳಿಗೆ ಮಾರು ಹೋಗಿರುವ ಮಂದಿ ದಿನಬೆಳಗಾದರೆ ಸ್ಟ್ರೀಟ್ ಫುಡ್ ಸೆಂಟರ್ ಗಳ ಬಳಿ ನಿಲ್ಲುತ್ತಾರೆ. ಇಂತಹ ಜನರನ್ನು ಆಕರ್ಷಿಸಲು ಅಂಗಡಿ ಮಾಲೀಕರು ಕೂಡ ಭಿನ್ನ ವಿಭಿನ್ನ ರೀತಿಯಲ್ಲಿ ಅವರನ್ನು ಉಪಚರಿಸುತ್ತಾರೆ.
ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ರೀತಿಯಲ್ಲಿ ಸರ್ವ್ ಮಾಡುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇವೆ. ಈ ಪಟ್ಟಿಗೆ ಮುಂಬೈನ ಫ್ಲೈಯಿಂಗ್ ವಡೆ ಸೇರಿಕೊಂಡಿದೆ.
ಕೆಲವು ದಿನಗಳ ಹಿಂದೆ ಟರ್ಕಿಶ್ ಐಸ್ ಕ್ರೀಮ್, ದೆಹಲಿಯ ಫ್ಲೈಯಿಂಗ್ ಪರೋಟ, ಮುಂಬೈನ ಫ್ಲೈಯಿಂಗ್ ದೋಸೆ ಸೇರಿದಂತೆ ಹಲವಾರು ಫಾಸ್ಟ್ ಫುಡ್ ಸೆಂಟರ್ ಗಳು ವೈರಲ್ ಆಗಿದ್ದವು. ಇದೀಗ ಮುಂಬೈನ ಬೋರಾ ಬಜಾರ್ ನಲ್ಲಿರುವ ‘ರಘು ದೋಸಾ ವಾಲಾ’ ಎಂಬ ಅಂಗಡಿ ಕೂಡ ಫೇಮಸ್ ಆಗಿದೆ. ಇದಕ್ಕೆ ಕಾರಣ ಅವರು ವಡೆ ತಯಾರಿಸುವ ವಿಶೇಷ ರೀತಿ.
ರಘು ದೋಸಾ ವಾಲ ಹೋಟೆಲ್ ಅನ್ನು ಕಳೆದ 64 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಗ್ರಾಹಕರು ಎಂದಿಗೂ ಕಡಿಮೆಯಾಗಿಲ್ಲ. ಇವರು ವಡೆಯನ್ನು ಚಮಚದಿಂದ ಮೇಲಕ್ಕೆ ಎಸೆದು ಮತ್ತೊಂದು ಕೈಯ್ಯಲ್ಲಿ ಕ್ಯಾಚ್ ಹಿಡಿದು ವಡೆ ತಯಾರು ಮಾಡುವ ವಿಧಾನ ಗ್ರಾಹಕರನ್ನು ಆಕರ್ಷಿಸುತ್ತದೆ. ಇದೇ ಕಾರಣಕ್ಕೆ ಈ ಅಂಗಡಿ ಯಾವಾಗಲೂ ಗಿಜಿ ಗಿಜಿ ಅನ್ನುತ್ತಿರುತ್ತದೆ.
ರಘು ವಡೆ ವಾಲಾ ಹೋಟೆಲ್ ನಲ್ಲಿ ಬೆಣ್ಣೆ ವಡೆ ಕೂಡ ಸಿಗುತ್ತದೆ. ಇವರು ವಿಶಿಷ್ಟ ರೀತಿಯಲ್ಲಿ ವಡೆ ತಯಾರಿಸುವ ವಿಡಿಯೋವನ್ನು ಆಮ್ ಚಿ ಮುಂಬೈ ಎಂಬ ಯೂಟೂಬ್ ಚಾನೆಲ್ ಶೂಟ್ ಮಾಡಿದೆ.