ಅನಾವಶ್ಯಕ ಚಲನವಲನ ನಿಯಂತ್ರಿ ಸಲು ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಫ್ಲೆ çಯಿಂಗ್ ಸ್ಕ್ವಾಡ್ ರಚನೆ ಮಾಡಲಾಗಿದೆ.
Advertisement
ಪ್ರಮುಖವಾಗಿ ಅಂಗಡಿಗಳ ಮುಂಭಾಗದಲ್ಲಿ ಗ್ರಾಹಕರ ಮಧ್ಯೆಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳಲು ಗುರುತು ಹಾಕುವುದು, ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಅಂಗಡಿ ಮಾಲಕರಿಗೆ ವಿವರಿಸುವುದು, ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರತಿ ಗಂಟೆಗೊಮ್ಮೆ ತಮ್ಮ ವ್ಯಾಪ್ತಿಯ ಎಲ್ಲ ಅಂಗಡಿಗಳನ್ನು ಪರಿಶೀಲನೆ ಮಾಡುವುದು, ಎಲ್ಲ ಅಂಗಡಿ ಮುಂಗಟ್ಟುಗಳನ್ನು ನಿಗದಿತ ಅವಧಿ ಮೀರಿ ತೆರೆದಿರದಂತೆ ಖಚಿತ ಪಡಿಸಿಕೊಳ್ಳುವುದು, ಅಂಗಡಿಗಳ ಮುಂದೆ ಜನದಟ್ಟಣೆ ಆಗದಂತೆ ಕ್ರಮ ಕೈಗೊಳ್ಳುವುದು ಮತ್ತು ಅಂಗಡಿಗಳಲ್ಲಿ ಕನಿಷ್ಠ 5 ಅಡಿ ಅಂತರದಿಂದ ಸರದಿ ವ್ಯವಸ್ಥೆ ಪ್ರಾರಂಭಿಸುವುದು, ಅಂಗಡಿಗಳ ಮಾಲಕರು ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಅವರಿಗೆ ಎಚ್ಚರಿಕೆ ನೀಡಿ ಅಂಗಡಿಗಳನ್ನು ತತ್‌ಕ್ಷಣ ಮುಚ್ಚುವುದು, ಪ್ರತಿದಿನ ಸೂಚನೆ ಗಳನ್ನು ಉಲ್ಲಂಘಿಸಿರುವ ಅಂಗಡಿಗಳು ಮತ್ತು ಮುಚ್ಚಲಾದ ಅಂಗಡಿಗಳ ವಿವರವನ್ನು ಜಿಲ್ಲಾಧಿಕಾರಿಗಳಿಗೆ ವರದಿ ಮಾಡುವುದು ಸ್ಕ್ವಾಡ್‌ನ ಪ್ರಮುಖ ಕೆಲಸಗಳಾಗಿವೆ.