Advertisement

ಮೈಸೂರಿನ ಮನೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ಹಾರುವ ಹಾವು ಪತ್ತೆ!

05:06 PM Jun 04, 2020 | sudhir |

ಮೈಸೂರು: ನಗರದ ಮನೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ಹಾರುವ ಹಾವೊಂದು (ಆರ್ನೇಟ್ ಫ್ಲೈಯಿಂಗ್ ಸ್ನೇಕ್) ಗುರುವಾರ ಕಾಣಿಸಿಕೊಂಡಿದೆ.

Advertisement

ರಾಮಾನುಜ ರಸ್ತೆಯ ಮನೆಯ ಆವರಣದಲ್ಲಿ ಬೆಳಿಗ್ಗೆ ಕಾಣಿಸಿಕೊಂಡಿದ್ದು, ಸ್ಥಳೀಯರು ಈ ಹಾವನ್ನು ಕುತೂಹಲದಿಂದ ವೀಕ್ಷಿಸಿ ಫೋಟೊ ತೆಗೆದಿದ್ದಾರೆ.

ಬಳಿಕ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಹಾರುವ ಹಾವು ನಾಪತ್ತೆಯಾಗಿದೆ.

ಹಾವಿನ ವಿಶೇಷ: ಅಳಿವಿನಂಚಿನಲ್ಲಿರುವ ಈ ಹಾವು ಪಶ್ಚಿಮಘಟ್ಟ, ದಟ್ಟಕಾಡಿನಲ್ಲಿ ಕಂಡುಬರುತ್ತದೆ. ಇದು ಮರದಿಂದ ಮರಕ್ಕೆ ಹಾರುತ್ತಾ ಪಕ್ಷಿಯ ಗೂಡುಗಳಲ್ಲಿರುವ ಮೊಟ್ಟೆ, ಸಣ್ಣ ಪಕ್ಷಿಗಳನ್ನ ಬಕ್ಷಿಸುತ್ತದೆ.

ಇದೆ ಮೊದಲ ಬಾರಿಗೆ ಮೈಸೂರಿನಲ್ಲಿ ಈ ಹಾವು ಕಾಣಿಸಿಕೊಂಡಿರುವುದು ಉರಗ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದು, ಪಶ್ಚಮಘಟ್ಟದಿಂದ ಬರುವ ಗೂಡ್ಸ್ ವಾಹನ ಮೂಲಕ ಬಂದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next