ಚಿಕ್ಕಮಗಳೂರು:ದಟ್ಟ ಕಾಡಿನಲ್ಲಿ ವಾಸ ಮಾಡುವ ಹಾರುವ ಬೆಕ್ಕು ಇದೀಗ ಮೊದಲ ಬಾರಿಗೆ ಕೊಪ್ಪ ತಾಲೂಕಿನ ಕೊರಡಿ ಎಸ್ಟೇಟ್ ಬಳಿ ಕಾಣಿಸಿಕೊಳ್ಳುವ ಮೂಲಕ ಜನರನ್ನು ಅಚ್ಚರಿಗೆ ದೂಡಿದ ಪ್ರಸಂಗ ನಡೆದಿದೆ.
ಹಿಂದೆಂದೂ ಕಾಣದ ರೆಕ್ಕೆ ಇರುವ ಬೆಕ್ಕು ತೋಟದತ್ತ ಹಾರುತ್ತ ಬಂದ ವೇಳೆ ತಂತಿ ಬೇಲಿಗೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಅಪರೂಪದ ಹಾರುವ ಬೆಕ್ಕನ್ನು ಕಂಡ ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ.
ತಂತಿ ಬೇಲಿಯಿಂದ ಬೆಕ್ಕನ್ನು ಬಿಡಿಸಿದ ಕೂಡಲೇ ಅದು ಕಾಡಿನತ್ತ ಹಾರಿ ಹೋಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ತರಹದ ಅಪರೂಪದ ಹಾರುವ ಬೆಕ್ಕನ್ನು ಕಂಡ ಮಲೆನಾಡಿನ ಜನರು ಅಚ್ಚರಿಪಟ್ಟಿರುವುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Related Articles
ಹಕ್ಕಿಯಂತೆ ಎರಡು ರೆಕ್ಕೆಯನ್ನು ಹೊಂದಿರುವ ಬೆಕ್ಕನ್ನು ಕುತೂಹಲದಿಂದ ವೀಕ್ಷಿಸಿದ್ದ ಜನರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಪರೂಪದ ಹಾರುವ ಬೆಕ್ಕಿನ ದೃಶ್ಯಗಳು ವೈರಲ್ ಆಗಿದೆ.