Advertisement

ದಸರಾ ಹಿನ್ನೆಲೆ : ಗೋವಾದಲ್ಲಿ ಗಗನಕ್ಕೇರಿದ ಚೆಂಡು ಹೂವಿನ ದರ

05:34 PM Oct 13, 2021 | Team Udayavani |

ಪಣಜಿ : ದಸರಾ ಹಬ್ಬಕ್ಕಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಗೋವಾಕ್ಕೆ ಚೆಂಡು ಹೂವುಗಳ ಪೂರೈಕೆಯಾಗುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಗೋವಾದಲ್ಲಿ ಚೆಂಡು ಹೂವಿನ ದರ ಗಗನಕ್ಕೇರಿದೆ. ಹೆಚ್ಚಿನ ಬೆಲೆ ತೆತ್ತು ಗ್ರಾಹಕರು ಹಬ್ಬಕ್ಕೆ ಹೂವು ಖರೀದಿಸುವಂತಾಗಿದೆ.

Advertisement

ಸದ್ಯ ಗೋವಾದಲ್ಲಿ 100 ರಿಂದ 120 ರೂ ಪ್ರತಿ ಕಿಲೊ ದರದಂತೆ ಚೆಂಡು ಹೂವು ಮಾರಾಟ ಮಾಡಲಾಗುತ್ತಿದೆ. ಚೆಂಡು ಹೂವಿನ ಒಂದು ಸಣ್ಣ ಮಾಲೆಯನ್ನು 60 ರಿಂದ 80 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ದಸರಾ ಹಬ್ಬದ ದಿನದಂದು ಹೂವಿನ ದರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಕರ್ನಾಟಕದ ವಿವಿಧ ಭಾಗಗಳಿಂದ ಗೋವಾಕ್ಕೆ ಭಾರಿ ಪ್ರಮಾಣದಲ್ಲಿ ಚೆಂಡು ಹೂವು ಪೂರೈಕೆಯಾಗುತ್ತಿದ್ದು ಗೋವಾದ ಗಲ್ಲಿ ಗಲ್ಲಿಯಲ್ಲಿ ಭಾರಿ ಪ್ರಮಾಣದಲ್ಲಿ ಹೂವಿನ ಮಾರಾಟ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಗೋವಾದಲ್ಲಿ ಹೂವಿನ ಬೇಡಿಕೆ ಕೂಡಾ ಹೆಚ್ಚಾಗಿದ್ದು ಬೆಲೆ ಎಷ್ಟೇ ಆಗಿದ್ದರೂ ಕೂಡ ಹೂವು ಖರೀದಿ ಅನಿವಾರ್ಯ ಎಂಬಂತಾಗಿದೆ.

ಇದನ್ನೂ ಓದಿ :ಸಲೀಂ ಮಾತಿನಿಂದ ಮುಜುಗರವಾಗಿದೆ, ನನಗದು ಸಂಬಂಧಿಸಿಲ್ಲ: ಡಿಕೆಶಿ

Advertisement

Udayavani is now on Telegram. Click here to join our channel and stay updated with the latest news.

Next