Advertisement
ಅರ್ಜಿ ಸಲ್ಲಿಕೆಗೆ ಮೇ 28ಕ್ಕೆ ಕೊನೆ ದಿನವಾ ದರೂ ತೋಟಗಾರಿಕೆ ಇಲಾಖೆ ಈ ತಿಂಗಳ ಮೇ 30ಕ್ಕೆ ಅರ್ಜಿ ಸಲ್ಲಿಸಲು ಕೊನೇ ದಿನ ನಿಗದಿಪಡಿಸಿದೆ. ಲಾಕ್‌ಡೌನ್‌ನಿಂದ ತತ್ತರಿಸಿ ರುವ ಹೂವು ಬೆಳೆಗಾರರು ಅಗತ್ಯ ದಾಖಲೆ ಹೊಂದಿಸಿಕೊಂಡು ಅರ್ಜಿ ಸಲ್ಲಿ ಕೆಗೆ ಈಗ ತೋಟಗಾರಿಕೆ ಇಲಾಖೆಗೆ ಮುಗಿ ಬಿದ್ದಿದ್ದು ಜಿಲ್ಲೆಯಲ್ಲಿ ಸುಮಾರು 3-4 ಸಾವಿರ ಮಂದಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.
Related Articles
Advertisement
ಜಿಲ್ಲೆಗೆ ಬೇಕು 5-6 ಕೋಟಿ ರೂ. ಅನುದಾನ: ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಹೂವು ಬೆಳೆಗಾರರು ಸುಮಾರು 2,171 ಹೆಕ್ಟೇರ್‌ನಲ್ಲಿ ಹೂ ಬೆಳೆದಿದ್ದು ಪ್ರತಿ ಹೆಕ್ಟೇರ್‌ಗೆ ತಲಾ 25 ಸಾವಿರ ರೂ, ನಂತೆ ಜಿಲ್ಲೆಗೆ ಒಟ್ಟು 5-6 ಕೋಟಿ ರೂ.ಅನುದಾನ ಬೇಕಾಗಿದೆ. ಈಗಾಗಲೇ ರೈತರಿಂದ ಅರ್ಜಿ ಸ್ವೀಕರಿಸುತ್ತಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪಹಣಿಯಲ್ಲಿ ಹೂ ಬೆಳೆ ನಮೂದು ಆಗದೇ ಇರುವ ರೈತರಿಂದಲೂ ಅರ್ಜಿ ಸ್ವೀಕರಿಸುತ್ತಿದ್ದು ಪರಿಶೀಲನೆ ಬಳಿಕ ರೈತರಿಗೆ ಸರ್ಕಾರದ ನೆರವು ನೀಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ನಡೆಸಿರುವ ಬೆಳೆ ಸಮೀಕ್ಷೆ ಪ್ರಕಾರ 2,171 ಹೆಕ್ಟೇರ್‌ನಲ್ಲಿ ಹೂವು ಬೆಳೆಯು ತ್ತಾರೆ. ಈಗಾಗಲೇ ಸರ್ಕಾರದ ಸಹಾಯ ಧನ ಕೋರಿ ಒಟ್ಟು 2,800 ಕ್ಕೂ ಹೆಚ್ಚು ಅರ್ಜಿ ಬಂದಿದ್ದು ಎಲ್ಲಾ ಅರ್ಜಿಗಳ ಪರಿಶೀಲನೆ ಬಳಿಕ ಜೂನ್‌ನಲ್ಲಿ ರೈತರ ಖಾತೆಗಳಿಗೆ ಪರಿಹಾರ ಹಣ ನೇರವಾಗಿ ಜಮೆ ಮಾಡಲಾಗುವುದು. -ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಗೆ ಇಲಾಖೆ