Advertisement
ಪ್ರವಾಹ ಸಂತ್ರಸ್ತರಿಗೆ ಪೂರೈಸಲು ಸಾಕಷ್ಟು ಪರಿಹಾರ ಸಾಮಗ್ರಿಗಳು ಹರಿದು ಬರುತ್ತಿವೆ. ರಾಜ್ಯದ ವಿವಿದೆಡೆಗಳಿಂದ ದಾನಿಗಳು, ಸಂಘ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತರಿಗೆ ನೆರವಾಗಲು ಕಳುಹಿಸಿ ಕೊಡುತ್ತಿದ್ದಾರೆ.
ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳು, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನೆರೆ ಪೀಡಿತ ಪ್ರದೇಶ ಹೊಳೆಯಾಲೂರಿಗೆ ನೆರವು ನೀಡಲು ಸಾಮಗ್ರಿಗಳನ್ನು ಕಳುಹಿಸುತ್ತಿದ್ದಾರೆ. 10 ಸಾವಿರ ರೊಟ್ಟಿ ಸಂಗ್ರಹ, 55 ಪಾಕೇಟ್ 25 ಕೇಜಿ ಚೀಲದ ಅಕ್ಕಿ , 25 ಬಾಕ್ಸ್ ಬಿಸ್ಕೇಟ್ ,21 ಚೀಲದ ಬಟ್ಟೆಗಳು, 4 ಚೀಲದ ಹಾಸಿಗೆ ಮತ್ತು ಹೊದಿಕೆ, 3 ಚೀಲ ವಾಟರ್ ಪೌಚ್, 2 ಬಾಕ್ಸ್ ಪ್ರಥಮ ಚಿಕಿತ್ಸಾ ಔಷಧಿ ,5 ಬಾಕ್ಸ್ ಸಿಹಿ ತಿನಿಸುಗಳನ್ನು ಒಂದು ಮಿನಿ ಲೋಡ್ ನಲ್ಲಿ ಸಂಗ್ರಹಿಸಿ ಕಳುಹಿಸಲಾಗುತ್ತದೆ.
Related Articles
ಇಲ್ಲಿನ ಕೊಪ್ಪಳ ಕಾ ರಾಜಾ ಗೆಳೆಯರ ಬಳಗದಿಂದ ನೆರೆ ಸಂತ್ರಸ್ತರಿಗೆ ವಿತರಿಸಲು ಐದು ಕೆಜಿ ಪಲಾವ್ ಸಿದ್ದಪಡಿಸಲಾಗಿದೆ. ಸ್ನೇಹಿತರೆಲ್ಲ ಸೇರಿ ಇದನ್ನು ಸಿದ್ದಪಡಿಸಿದ್ದು, ಪ್ರವಾಹ ಪೀಡಿತರಿಗೆ ಹಂಚಲಾಗುವುದು.
Advertisement