Advertisement

ಪ್ರವಾಹಕ್ಕೆ ಕಂಗಾಲು: ನೇಪಾಲದಲ್ಲಿ 115 ಮಂದಿ ಸಾವು

08:30 AM Aug 16, 2017 | Team Udayavani |

ಕಠ್ಮಂಡು: ಕಳೆದೊಂದು ವಾರದಿಂದ ನೇಪಾಲವನ್ನು ಕಾಡುತ್ತಿರುವ ಭಾರೀ ಪ್ರಮಾಣದ ನೆರೆ ಹಾಗೂ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 115ಕ್ಕೇರಿದೆ. ಪ್ರತ್ಯೇಕ ಘಟನೆಗಳಲ್ಲಿ ನಾಪತ್ತೆಯಾದವರ ಪೈಕಿ 40ಕ್ಕೂ ಹೆಚ್ಚು ಮಂದಿಯ ಸುಳಿವು ಇನ್ನೂ ಸಿಕ್ಕಿಲ್ಲ. ಅಲ್ಲದೆ, ಹಿಮಾಲಯದ ತಪ್ಪಲು ಪ್ರದೇಶ ಗಳಲ್ಲಿ ಸುರಿದ ಕುಂಭದ್ರೋಣ ಮಳೆಗೆ ಅಪಾಯಕ್ಕೆ ಸಿಲುಕಿರುವ ಆರು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬ್ರಿಟ್ನಾನಗರ ಜೋಗಬಾನಿ ಗಡಿಯಲ್ಲಿ ಮಂಗಳವಾರ 7 ಮಂದಿ ಶವವನ್ನು ಪ್ರವಾಹದಿಂದ ಹೊರಗೆತ್ತಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ.

ಚೀನ ನೆರವು: ನೆರೆ ರಾಷ್ಟ್ರ ಚೀನ ಪ್ರವಾಹ ಪೀಡಿತ ಪ್ರದೇಶಗಳಿಗೆಂದು 6.41 ಕೋಟಿ ರೂ. ಪರಿಹಾರ ನೀಡುತ್ತಿರುವುದಾಗಿ ತಿಳಿಸಿದೆ. ನೇಪಾಲ ಪ್ರತಿನಿಧಿಗಳ ಜತೆ ಚರ್ಚಿಸಲಾಗಿದ್ದು, ಸಹಕಾರ ಬೇಕಿದ್ದಲ್ಲಿ ನೀಡುವುದಾಗಿ ಹೇಳಲಾಗಿದೆ.

ಭಾರತದಿಂದ 30 ಆ್ಯಂಬುಲೆನ್ಸ್‌ ಗಿಫ್ಟ್
ಪ್ರವಾಹದಿಂದ ತತ್ತರಿಸಿರುವ ನೇಪಾಲದ ಸಹಾಯಕ್ಕೆ ಭಾರತ, ಚೀನ ಮುಂದಾಗಿವೆ. ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಿರುವ ಭಾರತೀಯ ರಾಯಭಾರ ಕಚೇರಿ, ಸಂಕಷ್ಟದಲ್ಲಿರು ವವರ ನೆರವಿಗಾಗಿ 30 ಆ್ಯಂಬುಲೆನ್ಸ್‌ ಕಳುಹಿಸಿದ್ದಾಗಿ ತಿಳಿಸಿದೆ. ರಾಯಭಾರಿ ಮಂಜೀವ್‌ ಸಿಂಗ್‌ ಪುರಿ ಅವರು ಎಲ್ಲ ಆ್ಯಂಬುಲೆನ್ಸ್‌ಗಳನ್ನು ಅಗತ್ಯವಿರುವ ಆಸ್ಪತ್ರೆಗೆಗಳಿಗೆ ನೀಡಿದ್ದಾರೆ. ಅಲ್ಲದೇ, 57.3 ದಶಲಕ್ಷ ಮೌಲ್ಯದ ನೇಪಾಲಿ ರೂ. ಚೆಕ್‌ಗಳನ್ನು ವಿತರಿಸಲಾಗಿದೆ. ಸೂರಿಲ್ಲದ ವರಿಗೆ ಚಾದರ ವಿತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next