Advertisement

ಪ್ರಾಚ್ಯ ಇಲಾಖೆ ವಿರುದ್ಧ ನೆರೆ ಸಂತ್ರಸ್ತರ ಧರಣಿ

12:05 PM Dec 01, 2019 | Suhan S |

ನಂಜನಗೂಡು: ನೆರೆ ಪರಿಹಾರ ಸಂಬಂಧ ಪ್ರಾಚ್ಯ ವಸ್ತು ಇಲಾಖೆ ವಿರುದ್ಧ ಕಪಿಲೆಯ ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದರು.  ರಾಜ್ಯ ಕಬ್ಬು ಬೆಳಗಾರರ ಸಂಘದ ಆಶ್ರಯದಲ್ಲಿ ಪಟ್ಟಣದ ತೋಪಿನ ಬೀದಿ ಹಾಗೂ ಕುರುಬಗೇರಿಯ ಕಪಿಲಾ ನೆರೆ ಸಂತ್ರಸ್ತರು ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿರುವ ಪ್ರಾಚ್ಯವಸ್ತು ಇಲಾಖೆಯ ಕಚೇರಿ ಬಳಿ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಪಿಲಾ ನದಿ ಪ್ರವಾಹ ಬಂದು ಮನೆ ಮಠ ಕಳೆದುಕೊಂಡ ನಮಗೆ ಮನೆ ದುರಸ್ತಿಗೆ ಸರ್ಕಾರ ಹಣನೀಡಿದ್ದು, ಆದರೆ, ಮನೆ ದುರಸ್ತಿಗೆ ಪ್ರಾಚ್ಯವಸ್ತು ಇಲಾ ಖೆಯ ಅಧಿಕಾರಿ ಬಿಡುತ್ತಿಲ್ಲ. ಲಂಚಕ್ಕೆ ಬೇಡಿಕೆಯೊಡ್ಡುತ್ತಿದ್ದಾರೆ ಎಂದು ಸಂತ್ರಸ್ತರು ದೂರಿದರು.

ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಎಚ್‌.ಎಂ. ರವೀಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿಮನವೊಲಿಸಲು ಯತ್ನಿಸಿದರು. ಆದರೆ, ಪ್ರಾಚ್ಯವಸ್ತುಇಲಾಖೆ ಅಧಿಕಾರಿ ಕೃಷ್ಣಪ್ಪ ಅವರನ್ನೇ ಸ್ಥಳಕ್ಕೆ ಕಳುಹಿಸಿ ಎಂದು ಪಟ್ಟು ಹಿಡಿದರು. ಪ್ರತಿಭಟನೆ ಮುಂದುವರಿದ ವಿಷಯ ತಿಳಿದ ತಹಶೀಲ್ದಾರ್‌ ಮಹೇಶ ಕುಮಾರ್‌, ತಮ್ಮ ಇಲಾಖೆಯಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪ್ರತಿಭಟನಾಕಾರ ರೊಂದಿಗೆ ದೂರವಾಣಿಯಲ್ಲೇಚರ್ಚಿಸಿ ಮನವೊಲಿಸಲು ಪ್ರಯತ್ನಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಂತ್ರಸ್ತರು, ದೇವಾಲಯದ ಸುತ್ತ ಛತ್ರ, ಭವನ, ವಸತಿ ಗೃಹ, ಅತಿಥಿಗೃಹ ನಿರ್ಮಿಸಿಕೊಳ್ಳಬಹುದು. ಆದರೆ, ಬಡವರು ಮಾತ್ರ ತಮ್ಮ ಮನೆಗಳನ್ನು ದುರಸ್ತಿ ಮಾಡಿಕೊಳ್ಳಬಾರದು ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ತಹಶೀಲ್ದಾರ್‌ ಅವರನ್ನು ಪ್ರಶ್ನಿಸಿದರು.

ಬಳಿಕ ತಹಶೀಲ್ದಾರ್‌ ಮಹೇಶ್‌ ಕುಮಾರ್‌ ಅವರು,ಸಂಬಂಧಪಟ್ಟ ಅಧಿಕಾರಿ ಹಾಗೂ ನಿಮ್ಮನ್ನುಮುಖಾಮುಖೀ ಭೇಟಿ ಮಾಡಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಇದೇಸಂಘಟನೆಯ ನೇತೃತ್ವದಲ್ಲಿ ಪೊರಕೆ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲೂಕು ಕಬ್ಬು ಬೆಳೆಗಾರರಸಂಘಟನೆಯ ತಾಲೂಕು ಅಧ್ಯಕ್ಷ ಹಾಡ್ಯ ರವಿ,ನಗರಸಭಾ ಸದಸ್ಯ ಕಪಿಲೇಶ, ಮುಖಂಡರಾದ ಸ್ನೇಕ್‌ ಬಸವರಾಜು, ಗೋಳೂರು, ಮಹದೇವಸ್ವಾಮಿ, ಜಯಕುಮಾರ, ಕುರುಬ ಗೇರಿ ತೋಪಿನ ಬೀದಿಗಳಸಂತ್ರಸ್ತರಾದ ರಾಜಮ್ಮ, ಜಯಲಕ್ಷ್ಮೀ, ಸುಬ್ಬಮ್ಮ, ಮಾಲಮ್ಮ, ಸಿದ್ದಮ್ಮ, ತುಳಸಿ, ಸುಧಾ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next