Advertisement
ಉದಯವಾಣಿ ಜತೆ ಮಾತನಾಡಿದ ಅವರು, ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಕಾವೇರಿಗೆ ನೀರು ಬಿಡಲಾಗಿದ್ದು ರಾತ್ರಿ 10ರಿಂದ 11 ಗಂಟೆಗೆ ತಾಲೂಕಿನ ಹಳೇ ಹಂಪಾಪುರ ದಾಸನಪುರ ಹಳೇ ಅಣಗಳ್ಳಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸರ್ಕಾರಿ ಬಸ್‌ನಲ್ಲಿ ಸಾಗಿಸಲಾಗುವುದು ಎಂದರು.
ಕಾಳಜಿ ಕೇಂದ್ರಕ್ಕೆ ಎಲ್ಲರೂ ಬರುವಂತೆ ಸೂಚನೆ ನೀಡಿದ್ದು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಕಾಳಜಿ ಕೇಂದ್ರಕ್ಕೆ ಬರುವ ಎಲ್ಲರಿಗೂ ರಾತ್ರಿಯಿಂದ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರು ಶೌಚಾಲಯದ ವ್ಯವಸ್ಥೆ ಹಾಗೂ ಚಾಪೆ ದಿಂಬು, ಹೊದಿಕೆ ನೀಡುವಂತೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆರೋಗ್ಯದಲ್ಲಿ ತೊಂದರೆ ಎದುರಾದರೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
Related Articles
Advertisement
80 ಜಾನುವಾರು ರಕ್ಷಣೆಪ್ರವಾಹ ಎದುರಾಗುವ ಗ್ರಾಮಗಳಲ್ಲಿ 80 ಜಾನುವಾರು ಪಟ್ಟಿ ಮಾಡಲಾಗಿದೆ. ಜತೆಗೆ ಕುರಿಗಳನ್ನು ನಗರದ ಆರ್‌ಎಂಸಿ ಆವರಣದಲ್ಲಿ ರಕ್ಷಣೆ ಮಾಡಲಾಗುವುದು. ಜಾನುವಾ ರುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪಶು ಸಂಗೋಪನಾ ಇಲಾಖೆಗೆ ವಹಿಸಲಾಗಿದೆ ಎಂದು ತಿಳಿಸಿದರು. ಕೊಳ್ಳೇಗಾಲ ತಾಲೂಕಿನ ದಾಸನಪುರಗ್ರಾಮಗಳಲ್ಲಿ ಜನರನ್ನು ಕಾಳಜಿ ಕೇಂದ್ರಕ್ಕೆ ಬರುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದರು. ಏರುತ್ತಲೇ ಇದೆ ಹೇಮಾವತಿ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು ಸೋಮವಾರ ಸಂಜೆಯ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಯಿತು. ಒಳ ಹರಿವಿನ ಪ್ರಮಾಣ ಏರುತ್ತಿರುವುದರಿಂದ ಒಂದು ಲಕ್ಷ ಕ್ಯುಸೆಕ್‌ನ್ನು ನದಿಗೆ ಬಿಡಲು ಅಣೆಕಟ್ಟು ವಿಭಾಗದ ಎಂಜಿನಿಯರ್‌ಗಳು ನಿರ್ಧರಿಸಿದ್ದು ಹೊರ ಹರಿವಿನ ಪ್ರಮಾಣ ಒಂದು ಲಕ್ಷಕ್ಕೂ ಅಧಿಕವಾಗುವ ಸಾಧ್ಯತೆಗಳಿದೆ. ಆದ್ದರಿಂದ ನದಿ ದಂಡೆಯ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಂದು ಎಚ್ಚರಿಸಿದ್ದಾರೆ.