Advertisement
ಮರಬಿದ್ದು, ಮಣ್ಣು ಕುಸಿದು ತಾಲೂಕಿನ ನಗರ ಗ್ರಾಮಾಂತರ ಪ್ರದೇಶ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಗುರುವಾರ ನಿಲುಗಡೆಯಾದ ವಿದ್ಯುತ್ ಸಂಪರ್ಕವನ್ನು ಶುಕ್ರವಾರವೂ ಮುಂದುವರಿಸಿದ್ದು ಇಲಾಖಾ ಲೈನ್‌ಮೆನ್, ಮೆಸ್ಕಾಂ ಜೆ.ಇ. ಸಹಿತ ಸಿಬಂದಿಗಳು ಅಡಚಣೆ ಉಂಟಾದ ಪ್ರದೇಶಗಳಲ್ಲಿ ಸಂಚರಿಸಿ ದುರಸ್ತಿ ಕಾರ್ಯ ಮಾಡುತ್ತಿದ್ದರೂ ಇನ್ನೂ ಅನೇಕ ಮಂದಿ ತೊಂದರೆಯಲ್ಲಿ ಇರುವುದಾಗಿ ಮಾಹಿತಿ ಮೂಲಗಳು ಹೇಳಿದೆ.
ಪಾಣೆಮಂಗಳೂರು ಆಲಡ್ಕ ಸೇತುವೆಯ ಮೇಲೆ ನೆರೆ ನೀರು ಉಕ್ಕಿ ಬಂದಿದ್ದು ಅಲ್ಲಿಯೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಿಸಿದ್ದಾರೆ. ನೀರಲ್ಲಿ ಯಾರೂ ಈಜುವುದಕ್ಕೆ ಹೋಗದಂತೆ ಎಚ್ಚರಿಸಲಾಗಿದೆ.
ಬಂಟ್ವಾಳ ಬಡ್ಡಕಟ್ಟೆ, ರಾಯರಚಾವಡಿ, ಕಂಚುಗಾರಪೇಟೆ, ಬಸ್ತಿಪಡು³ಗಳಲ್ಲಿ ನೆರೆ ನೀರು ರಸ್ತೆಯ ಮೇಲಕ್ಕೆ ಬಂದಿದ್ದು ಸಂಚಾರ ನಿಯಂತ್ರಿಸಲಾಗಿದೆ.
Related Articles
ನೆರೆ ಪೀಡಿತರಿಗಾಗಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಪಾಣೆಮಂಗಳೂರು ಸುಣ್ಣದಗೂಡು ಶೆಡ್‌ಗಳಲ್ಲಿ ತಗ್ಗು ಪ್ರದೇಶದಲ್ಲಿ ವಾಸ್ತವ್ಯ ಇದ್ದಂತಹ 80ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಅವರಿಗೆ ಬೆಳಗ್ಗಿನ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
Advertisement
ಪ್ರಮುಖವಾಗಿ ಆಲಡ್ಕಪಡು, ಪಾಣೆಮಂಗಳೂರು ಗೂಡಿನಬಳಿಯ ಶೆಡ್‌ಗಳಲ್ಲಿ ವಾಸ್ತವ್ಯ ಇದ್ದಂತಹ ಕೂಲಿಕಾರ್ಮಿಕರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ನೆರೆ ಏರುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸ್ಥಳಾಂತರ ಕಾರ್ಯಾಚರಣೆ ನಡೆಸಿದ್ದಾಗಿ ಬಂಟ್ವಾಳ ತಹಶೀಲ್ದಾರ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.