Advertisement
ಬಂಡೆಕಲ್ಲು ಉರುಳಿ ಬೀಳುವ, ಗುಡ್ಡದ ಮಣ್ಣು ಕುಸಿಯುವ ಪ್ರದೇಶಗಳ ಮಂದಿಯೂ ಜಾಗರೂಕರಾಗಿರುವಂತೆ ಅವರು ಸಲಹೆ ನೀಡಿದ್ದಾರೆ. ಈ ಪ್ರದೇಶಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹೊಣೆ ನೀಡಲಾಗಿದೆ. ಸಾರ್ವಜನಿಕರು ಅಧ್ಯಕ್ಷರು ನೀಡುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹೇಳಿದರು.
ಬಿರುಸಿನ ಮಳೆಯಿಂದ ಹಾನಿಯುಂಟಾಗುತ್ತಿರುವ ಪ್ರದೇಶಗಳಲ್ಲಿ ಸಾರ್ವಜನಿಕರು ರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುವುದು ಅಭಿನಂದನಾರ್ಹ ವಿಚಾರ. ಆದರೆ ಈ ಬಗ್ಗೆ ಯಾವುದೇ ತರಬೇತಿಯಿಲ್ಲದ, ಕಾಯಕದಲ್ಲಿ ಅನುಭವವಿಲ್ಲದ ಮಂದಿ ರಕ್ಷಣಾಕಾರ್ಯದಲ್ಲಿ ತೊಡಗುವುದು ಅಪಾಯಕಾರಿ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು
ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸ್ವಯಂಸೇವಾ ಚಟುವಟಿಕೆಗಳಲ್ಲಿ ನಿರತರಾದವರು ಮತ್ತು ಜನಪ್ರತಿನಿಧಿಗಳು ಗಮನಹರಿಸುವಂತೆ ಅವರು ಸಲಹೆಮಾಡಿದ್ದಾರೆ.