Advertisement

ಡೋಣಿ ನದಿ ಪ್ರವಾಹ: ನಡುಗಡ್ಡೆಯಲ್ಲಿ ಸಿಲುಕಿದ ಕಾರ್ಮಿಕರು! ರಕ್ಷಣಾ ಕಾರ್ಯ ಚುರುಕು

05:38 PM Oct 15, 2020 | sudhir |

ವಿಜಯಪುರ : ಮಳೆಯ ಅಬ್ಬರ ಕಡಿಮೆಯಾದರೂ ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ಪ್ರವಾಹ ಮುಂದುವರೆದಿದೆ. ತಾಳಿಕೋಟೆ ಪಟ್ಟಣದ ಹೊರ ಭಾಗದಲ್ಲಿ ಹರಿಯುವ ನದಿಯಲ್ಲಿ ಮಹಾರಾಷ್ಟ್ರ ರಾಜ್ಯದ ಏಳು ಜನ ಕಾರ್ಮಿಕರು ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದು, ರಕ್ಷಣೆಗೆ ಗೋಗರೆಯುತ್ತಿದ್ದಾರೆ. ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ತಾಳಿಕೋಟೆ ಪಟ್ಟಣದ ಹೊರ ಭಾಗದಲ್ಲಿ ಹರಿಯುವ ಡೋಣಿ ನದಿಯ ನಡುಗಡ್ಡೆಯಲ್ಲಿ ಇಟ್ಟಂಗಿ ನಿರ್ಮಾಣ ಘಟಕದಲ್ಲಿ ಮಹಾರಾಷ್ಟ್ರದ ಒಂದೇ ಕುಟುಂಬದ ಏಳು ಜನ ದುಡಿಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಡೋಣಿ ನದಿಯಲ್ಲಿ ಪ್ರವಾಹ ಮುಂದುವರೆದಿದ್ದು, ನದಿಯ ಮಧ್ಯ ಭಾಗದಲ್ಲಿರುವ ನಡುಗಡ್ಡೆ ನೀರಿನಿಂದ ಆವೃತವಾಗಿದೆ. ಪರಿಣಾಮ ಕುಟುಂಬದ ಎಲ್ಲರೂ ನಡುಗಡ್ಡೆಯಲ್ಲಿರುವ ಮೇವಿನ ಬಣವೆ ಮೇಲೆ ಕುಳಿತು ಬಟ್ಟೆ ಬೀಸಿ, ಕೂಗಿ ರಕ್ಷಣೆಗೆ ಮೊರೆ ಇಡುತ್ತಿದ್ದಾರೆ.

ಪ್ರವಾಹಕ್ಕೆ ಸಿಲುಕಿರುವುದನ್ನು ಕಂಡ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸದ್ಯ ಕಾಮಿಕರು ರಕ್ಷಣೆ ಪಡೆದಿರುವ ಬಣವೆ ಕೂಡ ಜಲಾವೃತವಾಗಿದ್ದು, ನೀರಿನ ಪ್ರಮಾಣ ಹೆಚ್ಚಿದಲ್ಲಿ ಬಣವೆ ಕೊಚ್ಚಿ ಹೋಗುವ ಅಪಾಯ ಎದುರಾಗಿದೆ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೋಣಿಗಳನ್ನು ಬಳಸಿ ತ್ವರಿತವಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಏರುವ ಭೀತಿ! ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

Advertisement

ಘಟನೆಯ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿರುವ ಸಹಾಯಕ ಆಯುಕ್ತ ಬಲರಾಮ ಲಮಾಣಿ, ತಾಳಿಕೋಟೆ ತಹಸೀಲ್ದಾರ ಅನಿಲಕುಮಾರ್ ಢವಳಗಿ ನೇತೃತ್ವದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇದರಲ್ಲಿ ಇಟ್ಟಂಗಿಬಟ್ಟಿ ಇನ್ನೊಂದು ಗುಂಪಿನ ಕಾರ್ಮಿಕನನ್ನು ರಕ್ಷಿಸಿರುವ ಅಧಿಕಾರಿಗಳು, ನಡುಗಡ್ಡೆಯಲ್ಲಿರುವ ಸಿಲುಕಿರುವ ಇತರೆ ಕಾರ್ಮಿಕರ ಮಾಹಿತಿ ಸಂಗ್ರಹದಲ್ಲಿ ತೊಡದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next