Advertisement

ಅರುಣಾಚಲದಲ್ಲಿ ಭಾರೀ ಪ್ರವಾಹ ಭೀತಿ

06:00 AM Oct 20, 2018 | Team Udayavani |

ಬೀಜಿಂಗ್‌: ಟಿಬೆಟ್‌ ಹಾಗೂ ಚೀನಾ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿರುವುದರಿಂದಾಗಿ ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅಷ್ಟೇ ಅಲ್ಲ, ಭೂ ಕುಸಿತದಿಂದ ಬ್ರಹ್ಮಪುತ್ರ ನದಿಯ ಉಪನದಿಯಾಗಿರುವ ಯಾರ್ಲಂಗ್‌ ಸಾಂಗ್‌ಪೋ ಹರಿವಿಗೇ ಅಡ್ಡಿ ಉಂಟಾಗಿದ್ದು, ಕೃತಕ ಸರೋವರ ನಿರ್ಮಾಣವಾಗಿದೆ. ಬುಧವಾರ ಬೆಳಗ್ಗೆಯೇ ಭೂ ಕುಸಿತ ಸಂಭವಿಸಿದ್ದು, ನದಿ ಹರಿವಿನ ಕೆಳಭಾಗದಲ್ಲಿರುವವರಲ್ಲಿ ಆತಂಕ ಸೃಷ್ಟಿ ಯಾಗಿದೆ. ಈಗಾಗಲೇ ಈ ಭಾಗದಲ್ಲಿರುವ ಸುಮಾರು 6 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಗುರುವಾರದ ವೇಳೆಗೆ ಸುಮಾರು 130 ಅಡಿ ಎತ್ತರಕ್ಕೆ ನೀರು ನಿಂತಿರುವುದಾಗಿ ಹೇಳಲಾಗಿದೆ.

Advertisement

ಈ ಬಗ್ಗೆ ಭಾರತಕ್ಕೆ ಕಾಲಕಾಲಕ್ಕೆ ಚೀನಾ ಮಾಹಿತಿ ನೀಡುತ್ತಿದ್ದು, ಈವರೆಗೆ ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ.ಅರುಣಾಚಲ ಪ್ರದೇಶದ ಈಸ್ಟ್‌ ಸಿಯಾಂಗ್‌ ಜಿಲ್ಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಸದ್ಯ ಬ್ರಹ್ಮಪುತ್ರಾ ನದಿಯಲ್ಲಿ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕುಸಿದ ಭಾಗವನ್ನು ಚೀನಾ ತೆರವುಗೊಳಿಸುತ್ತಿದ್ದಂತೆಯೇ ಈ ಭಾಗಕ್ಕೆ ನೀರು ಭಾರಿ ಪ್ರಮಾಣದಲ್ಲಿ ಹರಿಯುವ ಸಾಧ್ಯತೆಯಿದೆ. 2000ನೇ ಇಸ್ವಿಯಲ್ಲಿ ಇದೇ ನದಿಯಿಂದ ವ್ಯಾಪಕ ಪ್ರಮಾಣದಲ್ಲಿ ಒಂದೇ ಸಮನೆ ಹರಿದ ನೀರಿನಿಂದಾಗಿ ಅರುಣಾಚಲ ಪ್ರದೇಶದಲ್ಲಿ ಭಾರಿ ಹಾನಿ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next