Advertisement

ಮಂಗಳೂರು ನಗರ-ಗ್ರಾಮಾಂತರ: 49 ನೆರೆ ಬಾಧಿತ ಪ್ರದೇಶ

01:14 PM Jun 15, 2022 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಸಹಿತ ಗ್ರಾಮಾಂತರ ವ್ಯಾಪ್ತಿಯಲ್ಲಿ ಪ್ರವಾಹ ತಲೆದೋರಬಹುದಾದ 49 ಪ್ರದೇಶಗಳನ್ನು ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರ ಗುರುತಿಸಿದೆ. ಪ್ರವಾಹದ ಸಂದ ರ್ಭದಲ್ಲಿ ಬಾಧಿತರಾಗುವ ಜನರ ಸಂಖ್ಯೆಯನ್ನು ಅಂದಾಜಿಸಿ ಅನಿವಾರ್ಯ ವಾದರೆ ಅವರ ಸ್ಥಳಾಂತರಕ್ಕೆ ಬೇಕಾದ 39 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಭಾರಿ ಮಳೆಯಾಗುವ ಸಂದರ್ಭಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಹರಿಯುವ ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿಗಳ ಅಕ್ಕಪಕ್ಕ ಬರುವ ಕೆಲವು ಪ್ರದೇಶದಲ್ಲಿ ನೆರೆ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾ ಖೆಯಿಂದ ಭಾರಿ ಮಳೆಯ ಮುನೂ ಚನೆಗಳು ಬಂದ ಸಂದರ್ಭಗಳಲ್ಲಿ ಸಂಬಂಧಿತ ಪ್ರದೇಶದಲ್ಲಿ ವಿಶೇಷ ನಿಗಾವಹಿಸಲಾಗುತ್ತದೆ.

ಮಂಗಳೂರು ಮಹಾನಗರ ಪಾಲಿಕೆ ಹಾಗೂ ಗ್ರಾಮಾಂತರ ಸೇರಿ ನೆರೆ ಬಂದರೆ 11,200 ಮಂದಿ ಬಾಧಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಗ್ರಾಮಾಂತರ ಪ್ರದೇಶ: ನೆರೆ ಬಾಧಿತ ಪ್ರದೇಶ -ಉಳ್ಳಾಲ, ಮುಕ್ಕಚ್ಚೇರಿ, ಕೋಟೆಪುರ ಅಲೇಕಳ ಪ್ರದೇಶದ(ಬಾಧಿತರಾಗುವ ಜನಸಂಖ್ಯೆ 600) ಕಾಳಜಿ ಕೇಂದ್ರ -ಟಿಪ್ಪು ಸುಲ್ತಾನ್‌ ಉರ್ದು ಎಚ್‌ಎನ್‌ಎ ದ.ಕ.ಜಿ.ಪಂ.ಹಿ.ಪ್ರಾ. ಒಂಭತ್ತುಕೆರೆ, ಎಚ್‌ಪಿ ಸ್ಕೂಲ್‌ ಮೊಗವೀರ ಪಟ್ಣ ಹಾಗೂ ಒಂಭತ್ತುಕೆರೆ. ನೇತ್ರಾವತಿ ಉಳಿಯ, ಮುನ್ನೂರು ಪ್ರದೇಶದ ಕಾಳಜಿ ಕೇಂದ್ರ (550) -ರಾಣಿಪುರ ಹಿ.ಪ್ರಾ.ಶಾಲೆ ಪೆರ್ಮನ್ನೂರು. ಕಲ್ಲಾಪ ಪ್ರದೇಶದ ಕಾಳಜಿ ಕೇಂದ್ರ (650) -ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರ್ಮನ್ನೂರು. ಗಟ್ಟಿ ಕುದ್ರು, ಅಂಬ್ಲಿಮೊಗರು ಪ್ರದೇಶದ ಕಾಳಜಿ ಕೇಂದ್ರ(102) -ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಅಂಬ್ಲಿಮೊಗರು. ಪಾವೂರು ಉಳಿಯ ಇನೋಳಿ ಗಾಡಿ ಗದ್ದೆವ್ಯಾಪ್ತಿಯ ಕಾಳಜಿ ಕೇಂದ್ರ (150)-ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಗಾಡಿಗದ್ದೆ ಹಾಗೂ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇನೋಳಿ. ರಾಜಗುಡ್ಡೆ ಕಡೆಂಜ ಕಡವು ಪ್ರದೇಶದ ಕಾಳಜಿ ಕೇಂದ್ರ (240)-ಹರೇಕಳ ಶಾಲೆ. ಕಣ್ಣೂರು ಪ್ರದೇಶದ ಕಾಳಜಿ ಕೇಂದ್ರ (60)-ಮುಸ್ಲಿಂ ಚಾರಿಟೇಬಲ್‌ ಟ್ರಸ್ಟ್‌ ಕಣ್ಣೂರು, ಆಂಗ್ಲಮಾಧ್ಯಮ ಹಿ.ಪ್ರಾ ಶಾಲೆ ಕಣ್ಣೂರು. ಅಮ್ಮೆಂಬಳ ಬೋಳಿಯ ಪ್ರದೇಶದ ಕಾಳಜಿ ಕೇಂದ್ರ (75)-ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಅಮ್ಮೆಂಬಳ. ಚಂದ್ರಶಾನುಭೋಗ ಕುದ್ರು ಬಪ್ಪನಾಡು ಕಾಳಜಿ ಕೇಂದ್ರ(100)-ಸರಕಾರಿ ಮಾದರಿ ಹಿ.ಪ್ರಾ.ಶಾಲೆ- ಬಪ್ಪನಾಡು. ಬಪ್ಪನಾಡು ಬಡಗಹಿತ್ಲು ಪ್ರದೇಶದ ಕಾಳಜಿ ಕೇಂದ್ರ (150)-ಸರಕಾರಿ ಮಾದರಿ ಹಿ.ಪ್ರಾ.ಶಾಲೆ ಬಪ್ಪನಾಡು. ಬಳುRಂಜೆ, ಕರ್ನಿರೆ, ಕೊಪ್ಪಳ, ಪಚಂಗೇರಿ ಪ್ರದೇಶದ ಕಾಳಜಿ ಕೇಂದ್ರ (100)-ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕರ್ನಿರೆ. ಮಾನಂಪಾಡಿ ಪ್ರದೇಶದ ಕಾಳಜಿ ಕೇಂದ್ರ (600) -ಸರಕಾರಿ ಹಿ.ಪ್ರಾ.ಶಾಲೆ ಮಾನಂಪಾಡಿ. ಪಂಜದಕಲ್ಲು, ಕೊçಕುಡೆ ಪ್ರದೇಶದ ಕಾಳಜಿ ಕೇಂದ್ರ(360) – ಸರಕಾರಿ ಹಿ.ಪ್ರಾ.ಶಾಲೆ ಪಚ್ಚಿಜ. ಹಳೆಯಂಗಡಿ ಕರಿತೋಟ,ಪಾವಂಜೆ, ಕೊಳವೈಲು ಸಮುದ್ರಕೊರೆತ ಪ್ರದೇಶ ಸಸಿಹಿತ್ಲು ಕಾಳಜಿ ಕೇಂದ್ರ(60) -ಯುಬಿಎಂಸಿ ಹಿ.ಪ್ರಾ.ಶಾಲೆ ಹಳೆಯಂಗಡಿ. ಅತಿಕಾರಿ ಬೆಟ್ಟು ವ್ಯಾಪ್ತಿಯ ಕಾಳಜಿ ಕೇಂದ್ರ(240)-ವಾಸುದೇವ ರಾವ್‌ ಸ್ಮಾರಕ ಕಿರಿಯ ಹಿ.ಪ್ರಾ.ಶಾಲೆ ಅತಿಕಾರಿಬೆಟ್ಟು. ನಡುಗೋಡು ಮಿತ್ತಬೈಲು ಪ್ರದೇಶದ (48) ಕಾಳಜಿ ಕೇಂದ್ರ -ಹಳೆಯ ಪಂಚಾಯತ್‌ ಕಚೇರಿ ನಡುಗೋಡು. ಕಿಲೆಂಜಾರು ಮಾಡದ ಹೌಸ್‌ ಪ್ರದೇಶದ (40) ಕಾಳಜಿ ಕೇಂದ್ರ -ಸರಕಾರಿ ಹಿ.ಪ್ರಾ. ಶಾಲೆ ಕಿಲೆಂಜಾರು. ಬಪ್ಪನಾಡು ಪ್ರದೇಶದ (180) ಕಾಳಜಿ ಕೇಂದ್ರ-ಸರಕಾರಿ ಹಿ.ಪ್ರಾ. ಶಾಲೆ (ಬೋರ್ಡ್‌ ಶಾಲೆ) ಬಪ್ಪನಾಡು. ಮದಿ ಕೆಳಗಿನಕೆರೆ ಉಳಿಯ ಹೊಳೆ ಬದಿ ಪ್ರದೇಶದ (240) ಕಾಳಜಿ ಕೇಂದ್ರ-ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಅಡೂxರು, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ತಾರಿಕರಿಯ. ಮಾರನಕರಿಯ ದೋಣಿಂಜೆ ಕೊಳದ ಹೊಳೆಬದಿ ಕಾರಮೊಗರು ಪ್ರದೇಶದ (255) ಕಾಳಜಿ ಕೇಂದ್ರ -ಸರಕಾರಿ ಹಿ.ಪ್ರಾ. ಶಾಲೆ ಗುರುಪುರ. ಉಳಾಯಿಬೆಟ್ಟು ಪ್ರದೇಶದ (78) ಕಾಳಜಿ ಕೇಂದ್ರ -ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಉಳಾಯಿಬೆಟ್ಟು. ಅದ್ಯಪಾಡಿ ಪ್ರದೇಶದ ಕಾಳಜಿ ಕೇಂದ್ರ(168 ) -ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಅದ್ಯಪಾಡಿ. ಅಡ್ಯಾರ್‌ ಗುತ್ತು, ಆಚಾರಿಪಾಲು, ಬದ್ರಿಯಾಬೆಟ್ಟು, ವಳಚ್ಚಿಲು ಪ್ರದೇಶದ ಕಾಳಜಿ ಕೇಂದ್ರ (320)-ಗ್ರಾಮ ಪಂಚಾಯತ್‌ ಅಡ್ಯಾರ್‌. ಉಳಿದೊಟ್ಟು ನದಿ ಬದಿ, ಒಳಚ್ಚಿಲ್‌, ಅರ್ಕುಳ, ಬಂಗ್ಲಗುಡ್ಡೆ ಪ್ರದೇಶದ ಕಾಳಜಿ ಕೇಂದ್ರ(255)-ಗ್ರಾಮ ಚಾವಡಿ. ಮಳವೂರು, ಕೆಂಜಾರು ಪ್ರದೇಶದ ಕಾಳಜಿ ಕೇಂದ್ರ(500) -ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಕರಂಬಾರ್‌. ದೇಲಂತಬೆಟ್ಟು, ಸೂರಿಂಜೆ ಪ್ರದೇಶದ ಕಾಳಜಿ ಕೇಂದ್ರ (275) -ಪಂ.ಕಚೇರಿ ಸೂರಿಂಜೆ. ಕೆಳಗಿನ ತೋಕೂರು, ಉಳಿಯ ಪ್ರದೇಶದ ಕಾಳಜಿ ಕೇಂದ್ರ (1250)-ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಜೋಕಟ್ಟೆ. ಚೇಳಯೂರು, ಮಧ್ಯ ಪ್ರದೇಶದ ಕಾಳಜಿ ಕೇಂದ್ರ (290) -ದ. ಕ.ಜಿ.ಪಂ.ಹಿ.ಪ್ರಾ.ಶಾಲೆ ಚೇಳಯೂರು. ಕೆಂಜಾರು ಗ್ರಾಮ ಪ್ರದೇಶದ ಕಾಳಜಿ ಕೇಂದ್ರ (420)-ಅನುದಾನಿತ ಹಿ.ಪ್ರಾ.ಶಾಲೆ ಉಳಿಯ ಕೆಂಜಾರು. ಮೂಡುಶೆಡ್ಡೆ, ಪಡುಶೆಡ್ಡೆ ಪ್ರದೇಶದ ಕಾಳಜಿ ಕೇಂದ್ರ(200) -ಬಿ.ಎಚ್‌.ಎಸ್‌. ಶಾಲೆ ಮೂಡುಶೆಡ್ಡೆ ಶಾಲೆ.

1 ಸಾವಿರ ಮಂದಿಗೆ ಆಶ್ರಯ ತಾಣ:

Advertisement

ವಿಶ್ವಬ್ಯಾಂಕ್‌ ನೆರವಿನ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಲ್ಲಿ (ಎನ್‌.ಸಿ.ಆರ್‌.ಎಂ.ಪಿ) ಉಳ್ಳಾಲ ತಾಲೂಕಿನ ಒಂಭತ್ತುಕೆರೆ ಹಾಗೂ ಮಂಗಳೂರು ತಾಲೂಕಿನ ಹೊಸಬೆಟ್ಟು ಪ್ರದೇಶದಲ್ಲಿ 2 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ. ಪ್ರಾಕೃತಿಕ ವಿಕೋಪದಂತಹ ತುರ್ತು ಸನ್ನಿವೇಶದಲ್ಲಿ ಈ ಆಶ್ರಯತಾಣಗಳನ್ನು ಬಹುಪಯೋಗಿ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಸುಸಜ್ಜಿತವಾದ ವಿದ್ಯುತ್‌ ವ್ಯವಸ್ಥೆ, ಅಡುಗೆ ಕೋಣೆ, ಪ್ರತ್ಯೇಕ ಶೌಚಾಲಯ ಒಳಗೊಂಡಿದ್ದು, ಸುಮಾರು 1 ಸಾವಿರ ಜನರನ್ನು ಏಕಕಾಲದಲ್ಲಿ ಸ್ಥಳಾಂತರಿಸಲು ಅವಕಾಶವಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

ಮಂಗಳೂರು ಪಾಲಿಕೆ ವ್ಯಾಪ್ತಿ:

ನೆರೆ ಬಾಧಿತ ಪ್ರದೇಶ -ಕಸ್ಬಾ ಬೆಂಗ್ರೆ(ಬಾಧಿತರಾಗುವ ಜನಸಂಖ್ಯೆ-260) ಕಾಳಜಿ ಕೇಂದ್ರ-ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೆಂಗ್ರೆ. ಪಾಂಡೇಶ್ವರ ರೈಲ್ವೇ ಗೇಟ್‌ ಬಳಿಯ ಕಾಳಜಿ ಕೇಂದ್ರ (90)-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಾಂಡೇಶ್ವರ. ಹೊಗೆ ಬಜಾರ್‌ ಜಿ.ಎಚ್‌. ಶಾಲೆ ಹಿಂಭಾಗ ಪ್ರದೇಶದ ಕಾಳಜಿ ಕೇಂದ್ರ (100)- ಸರಕಾರಿ ಪ್ರೌಢಶಾಲೆ  ಹೊಯ್ಗೆ ಬಜಾರ್‌. ಹೊಯ್ಗೆ ಬಜಾರ್‌ ಧೂಮಾವತಿ ದೈವಸ್ಥಾನದ ಹಿಂಭಾಗದಲ್ಲಿರುವ ಪ್ರದೇಶ ಕಾಳಜಿ ಕೇಂದ್ರ (125)-ದ.ಕ.ಜಿ.ಪಂ. ಶಾಲೆ ಹೊಯ್ಗೆ ಬಜಾರ್‌. ಬೊಕ್ಕಪಟ್ಣ,ಕುದ್ರೋಳಿ ಪ್ರದೇಶದ ಕಾಳಜಿ ಕೇಂದ್ರ (100) -ದ.ಕ.ಜಿ.ಪಂ. ಶಾಲೆ ಬೊಕ್ಕಪಟ್ಣ. ಜಪ್ಪಿನ ಮೊಗರು-ಕಡೆಕಾರ್‌, ಕಟ್ಟಪುಣಿ, ಸಿಟಿ ಪ್ರದೇಶ, ಆಡಂಕುದ್ರು ಪ್ರದೇಶಗಳ ಕಾಳಜಿ ಕೇಂದ್ರ (700) -ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಜಾಲ್‌. ಬಜಾಲ್‌ ಪಡ್ಪು ಪ್ರದೇಶದ ಕಾಳಜಿ ಕೇಂದ್ರ(75) -ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಜಾಲ್‌. ಕೂಳೂರು ಜಂಕ್ಷನ್‌ ಪಡುಕೋಡಿ ಕಾಳಜಿ ಕೇಂದ್ರ (80)-ಚರ್ಚ್‌ ಸ್ಕೂಲ್‌ ಕುಳೂರು. ತಣ್ಣೀರುಬಾವಿ ಪ್ರದೇಶದ ಕಾಳಜಿ ಕೇಂದ್ರ(325) – ಕೂಳೂರು ಚರ್ಚ್‌ ಹಿ.ಪ್ರಾ.ಶಾಲೆ.

ಸರ್ವ ಸನ್ನದ್ಧ ವ್ಯವಸ್ಥೆ: ಮಂಗಳೂರು ತಾಲೂಕಿನಲ್ಲಿ ಮಹಾನಗರ ಪಾಲಿಕೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೆರೆ ಬಾಧಿತ ಪ್ರದೇಶಗಳನ್ನು ಗುರುತಿಸಲಾಗಿದೆ. ನೆರೆ ಬರುವ ಸಂದರ್ಭಗಳಲ್ಲಿ\ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಸ್ಥಳೀಯವಾಗಿ ಹತ್ತಿರ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಿಗೆ ನೋಡಲ್‌ ಅಧಿಕಾರಿಗಳನ್ನು ಕೂಡ ನೇಮಿಸಲಾಗಿದೆ. –ಡಾ|ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ     

Advertisement

Udayavani is now on Telegram. Click here to join our channel and stay updated with the latest news.

Next