Advertisement

ತೇಲುವ ಲೋಟಗಳು

06:00 AM Sep 20, 2018 | |

ಈ ವಾರದಿಂದ 
ಸ್ನೇಹಿತರನ್ನು ಮಂತ್ರಮುಗ್ಧರನ್ನಾಗಿಸಲು ಕ್ಲಿಷ್ಟಕರವಾದ ಮ್ಯಾಜಿಕ್ಕೇ ಆಗಬೇಕೆಂದಿಲ್ಲ. ಕ್ಷಣಮಾತ್ರದಲ್ಲಿ ಮುಗಿದುಹೋಗುವ ತಂತ್ರಗಳಿಂದಲೂ ಅಚ್ಚರಿ ಸಾಧ್ಯ. ಹೀಗೆ ಸರಳವಾದ ಕೈಚಳಕಗಳಿಂದಲೇ ಕನ್ನಡಿಗರನ್ನು ಮೋಡಿ ಮಾಡಿದವರು ಉದಯ್‌ ಜಾದೂಗರ್‌. ಅವರು ಇನ್ನುಮುಂದೆ “ಚಿನ್ನಾರಿ’ಗಳಿಗೆ ಯಕ್ಷಿಣಿ ವಿದ್ಯೆ ಹೇಳಿಕೊಡಲಿದ್ದಾರೆ. ಉದಯ್‌ ಅವರ ಮ್ಯಾಜಿಕ್ಕನ್ನು ಗಾಯತ್ರಿ ಯತಿರಾಜ್‌ ಅವರು ಸುಂದರವಾಗಿ ನಿರೂಪಿಸಿಕೊಟ್ಟಿದ್ದಾರೆ.

Advertisement

ಯಕ್ಷಿಣಿಗಾರರು ಗಾಳಿಯಲ್ಲಿ ಸುಂದರ ಬೆಡಗಿಯರನ್ನು, ವಸ್ತುಗಳನ್ನು ತೇಲಿಸುವುದನ್ನು ನೀವೆಲ್ಲಾ ನೋಡಿರ್ತೀರಿ. ಅಂಥದ್ದೆ ಒಂದು ಚಿಕ್ಕ ಟ್ರಿಕ್‌ ಇದು!

ಪ್ರದರ್ಶನ: 
ಯಕ್ಷಿಣಿಗಾರ ಒಂದು ರಟ್ಟಿಗೆ ಕರವಸ್ತ್ರವೊಂದನ್ನು ಸುತ್ತಿ ಅದರ ಮೇಲೆ ಎರಡು ಗ್ಲಾಸ್‌ ಗಳನ್ನು ಬೋರಲಾಗಿಡುತ್ತಾನೆ. ಅದನ್ನು ಎರಡೂ ಕೈಯಲ್ಲಿ ಮೇಲೆ ಕೆಳಗೆ ಒತ್ತಿ ಹಿಡಿದು, ಉಲ್ಟಾ ಮಾಡಿ, “ಗಿಲಿ ಗಿಲಿ ಪೂವ್ವಾ’ ಅನ್ನೋ ಮಂತ್ರ ಜಪಿಸಿ ಕೆಳಗಿನ ಕೈ ತೆಗೆಯುತ್ತಾನೆ. ಲೋಟಗಳು ಕೆಳಕ್ಕೆ ಬೀಳುವುದಿಲ್ಲ. 

ಬೇಕಾಗುವ ಪರಿಕರಗಳು:
ಒಂದು ದಾರದಲ್ಲಿ ಕಟ್ಟಲಾದ ಎರಡು ಮಣಿಗಳು(ಬೀಡ್ಸ್), ಸುಮಾರು  5 x 7 ಇಂಚಿನ ಅಳತೆಯ ರಟ್ಟು ಅಥವಾ ಖಾಲಿ ಜಾಮಿಟ್ರಿ ಬಾಕ್ಸ್ ಅಥವಾ ಪುಸ್ತಕ, ಎರಡು ಕಂಠವಿಲ್ಲದ ಲೋಟಗಳು, ಸ್ವಲ್ಪ ದೊಡ್ಡ ಅಂಚಿರುವ ಕರವಸ್ತ್ರ.

ಮಾಡುವ ವಿಧಾನ:
ಈ ತಂತ್ರವನ್ನು ಪ್ರದರ್ಶಿಸುವಾಗ ನೀವು ಪ್ರದರ್ಶನಕ್ಕೂ ಮೊದಲೇ, ಒಂದು ದಾರದಲ್ಲಿ ಎರಡು ಮಣಿಗಳನ್ನು ನಿಮ್ಮ ಹೆಬ್ಬಟ್ಟಿನ ಅಂತರ ಬಿಟ್ಟು ಪೋಣಿಸಿ ಎರಡೂ ಕಡೆಗೆ ಮಣಿ ಸರಿದಾಡದಂತೆ ಒಂದೊಂದು ಗಂಟು ಹಾಕಿಡಿ. ನೆನಪಿಡಿ ಎರಡು ಮಣಿಗಳ ಅಂತರ ನಿಮ್ಮ ಹೆಬ್ಬಟ್ಟು ಬಿಗಿಯಾಗಿ ಕೂರೂವಂತಿರಲಿ. (ಚಿತ್ರ-2 ನೋಡಿ)

Advertisement

ಇದನ್ನು ಕರವಸ್ತ್ರದ ಅಂಚಿನ ಮಧ್ಯಭಾಗದಲ್ಲಿ ಹೊಲಿಗೆಯನ್ನು ಸ್ವಲ್ಪ ಓಪನ್‌ ಮಾಡಿತೂರಿಸಿಡಿ. ಪ್ರದರ್ಶನದ ವೇಳೆಯಲ್ಲಿ ಪ್ರೇಕ್ಷಕರಿಗೆ ದಾರ ಇಟ್ಟಿರುವ ಅಂಚನ್ನು ಅವರಿಗೆ ಗೊತ್ತಾಗದಂತೆ ಹಿಡಿದು, ರಟ್ಟಿನ ಮಧ್ಯ ಭಾಗಕ್ಕೆ ಬರುವ ಹಾಗೆ ಸುತ್ತಿ. ಅದರ ಮೇಲೆ ಎರಡು ಖಾಲಿ ಲೋಟಗಳನ್ನು ಒಂದೊಂದು ಮಣಿಯ ಮೇಲೆ ಒಂದೊಂದು ಲೋಟ ಬರುವಂತೆ ಬೋರಲಾಗಿಡಿ. ಈಗ ನಿಮ್ಮ ಹೆಬ್ಬೆರಳನ್ನು ಎರಡೂ ಲೋಟಗಳ ನಡುವೆ ಒತ್ತಿ ಹಿಡಿಯಿರಿ, ಮತ್ತು ಆ ಎರಡೂ ಲೋಟಗಳನ್ನು ನಿಮ್ಮ ಇನ್ನೊಂದು ಕೈಯಿಂದ ಒತ್ತಿ ಹಿಡಿದು ಉಲ್ಟಾ ಮಾಡಿ ನಿಧಾನವಾಗಿ ಕೆಳಗಿನ ಕೈ ತೆಗೆಯಿರಿ. ಲೋಟಗಳು ಕೆಳಕ್ಕೆ ಬೀಳುವುದೇ ಇಲ್ಲ.

ಈ ಮ್ಯಾಜಿಕ್‌ಗೆ ವಿಡಿಯೋ ಕೊಂಡಿ- youtu.be/hdSdEjhiTTE

– ಉದಯ್‌ ಜಾದೂಗರ್‌

ನಿರೂಪಣೆ ಹಾಗೂ ಚಿತ್ರಗಳು: ಗಾಯತ್ರಿ ಯತಿರಾಜ್‌

Advertisement

Udayavani is now on Telegram. Click here to join our channel and stay updated with the latest news.

Next