Advertisement
ಈ ತೇಲುವ ನಗರಗಳು ಪರಿಸರ ಸಹ್ಯವಾಗಿದ್ದು, ಸಮುದ್ರ ತೀರದಲ್ಲಿ ತೇಲುತ್ತಲೇ ಜನರಿಗೆ ಅತ್ಯುತ್ತಮವಾದ ಜೀವನವನ್ನು ನೀಡಲಿದೆ. ಮನೆಗಳು, ಶಾಪಿಂಗ್ ಮಾಲ್‌ಗಳೊಂದಿಗೆ ಜನರಿಗೆ ಬೇಕಾದ ಆಹಾರ ಬೆಳೆಯಲು ಅತ್ಯಾಧುನಿಕ ವ್ಯವಸ್ಥೆಗಳು, ಮೀನುಗಾರಿಕೆಗೂ ಪೂರಕವಾಗಿರಲಿದೆ.
ನಗರವನ್ನು ತೇಲುವಂತೆ ಮಾಡುವುದು ಸುಲಭವೇನಲ್ಲ. ಇದರ ತಂತ್ರಜ್ಞಾನ, ನಿರ್ಮಾಣಕ್ಕೆ ಅಪಾರ ವೆಚ್ಚವಾಗುತ್ತದೆ. ಈ ಯೋಜನೆಯಿನ್ನೂ ಆಲೋಚನೆ ಹಂತದಲ್ಲಿದೆ. ಆದರೂ ಇದನ್ನು ಮಾಡಬಹುದು ಎಂದು ತಂತ್ರಜ್ಞರು ಅಭಿಪ್ರಾಯಕ್ಕೆ ಬಂದಿದ್ದಾರೆ. ಇಲ್ಲಿ ಜೀವನ ನಡೆಸುವುದು ಹೇಗೆ? ಸಮಸ್ಯೆಗಳು ಸೃಷ್ಟಿಯಾಗಬಹುದೇ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಹೇಗಿರಲಿದೆ ನಗರ?: ದೊಡ್ಡ ನಗರವನ್ನು ತೇಲುವಂತೆ ಮಾಡಲಾಗುತ್ತದೆ. ಒಂದು ಸಾಮಾನ್ಯ ನಗರ 10 ಸಾವಿರ ಮಂದಿಗೆ ವಾಸಸ್ಥಳವನ್ನು ಒದಗಿಸಿಕೊಡಲಿದೆ. ಇದು ಸಮುದ್ರದಲ್ಲಿ ತೇಲುವಂತೆ ಬೀಮ್‌ಗಳನ್ನು ಹೊಂದಿರಲಿದೆ. ಮುಂದಿನ 20 ವರ್ಷದೊಳಗೆ ಇಂತಹ ನಗರಗಳು ಸಾಕಾರವಾಗಲಿದ್ದು, ಪ್ರಪಂಚಾದ್ಯಂತ ಸಮುದ್ರ ತೀರದಲ್ಲಿರುವ, ಬೆಳೆಯುವ ದೇಶಗಳಿಗೆ ಪ್ರಯೋಜನಕಾರಿಯಾಗಲಿದೆ.