Advertisement

ಕಿರಾಣಿ ಅಂಗಡಿಗಳೊಂದಿಗೆ ಫ್ಲಿಪ್ ಕಾರ್ಟ್ ಸಹಯೋಗ

06:05 PM Oct 05, 2021 | Team Udayavani |

ಬೆಂಗಳೂರು: ಹಬ್ಬದ ಸೀಸನ್ ನಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಲಕ್ಷ  ಅಧಿಕ ಕಿರಾಣಿ ಅಂಗಡಿಗಳು ಫ್ಲಿಪ್ ಕಾರ್ಟ್ ನೊಂದಿಗೆ ಕೈಜೋಡಿಸಿವೆ.

Advertisement

ಚಾಲ್ತಿಯಲ್ಲಿರುವ ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಸ್ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ತನ್ನ ಕಿರಾಣಿ ಕಾರ್ಯಕ್ರಮವನ್ನು ದಕ್ಷಿಣ ಭಾರತಕ್ಕೂ ವಿಸ್ತರಣೆ ಮಾಡಿದೆ ಹಾಗೂ ಈ ಭಾಗದಲ್ಲಿ 32,000 ಕ್ಕೂ ಅಧಿಕ ಕಿರಾಣಿ ಅಂಗಡಿಗಳನ್ನು ಈ ಉಪಕ್ರಮದ ವ್ಯಾಪ್ತಿಗೆ ತಂದಿದೆ.

ಸ್ಥಳೀಯ ಸ್ಟೋರ್ ಗಳು ಮತ್ತು ಶಾಪ್ ಗಳಿಗೆ ನೆರವಾಗುವ ದೃಷ್ಟಿಯಿಂದ ಫ್ಲಿಪ್ ಕಾರ್ಟ್ ಕಿರಾಣಿ ಅಂಗಡಿಗಳನ್ನು ವಿತರಣಾ ಪಾಲುದಾರರನ್ನಾಗಿ ನೇಮಕ ಮಾಡುವ ಈ ಕಿರಾಣಿ ಕಾರ್ಯಕ್ರಮವನ್ನು 2019 ರಲ್ಲಿ ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ ವಿತರಣೆಗಳನ್ನು ಮಾಡುವ ವ್ಯವಹಾರಗಳಿಗೆ ಫ್ಲಿಪ್ ಕಾರ್ಟ್ ನಿರಂತರವಾಗಿ ಹೂಡಿಕೆ ಮಾಡುತ್ತಲೇ ಬಂದಿದೆ. ಫ್ಲಿಪ್ ಕಾರ್ಟ್ ನ ಕಿರಾಣಿ ಕಾರ್ಯಕ್ರಮದ ಭಾಗವಾಗಿ ಜನರಲ್ ಸ್ಟೋರ್ಸ್, ಟೇಲರ್ ಶಾಪ್ಸ್ ಮತ್ತು ಮಾಮ್-ಅಂಡ್-ಪಾಪ್ ಸ್ಟೋರ್ಸ್ ಅನ್ನು ತನ್ನ ಪಾಲುದಾರರನ್ನಾಗಿ ಮಾಡಿಕೊಂಡಿದೆ. ಇದರ ಮೂಲಕ ಲಕ್ಷಾಂತರ ಶಿಪ್ ಮೆಂಟ್ ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾ ಬಂದಿದೆ ಮತ್ತು ಈ ಸ್ಟೋರ್ ಗಳು ಹೊಸ ಆದಾಯದ ಜಾಲಗಳನ್ನು ಹೊಂದಲು ಸಾಧ್ಯವಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶಾದ್ಯಂತ ಇರುವ ಫ್ಲಿಪ್ ಕಾರ್ಟ್ ನ ಪಾಲುದಾರರು ತಮ್ಮ ಮಾಸಿಕ ವಿತರಣೆ ಆದಾಯದಲ್ಲಿ ಸರಾಸರಿ ಶೇ.30 ರಷ್ಟು ಹೆಚ್ಚಳ ಮಾಡಿಕೊಂಡಿವೆ. ಫ್ಲಿಪ್ ಕಾರ್ಟ್ ಭಾರತದ ಆದಾಯ ವೃದ್ಧಿ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಹೊಸ ಮಾರ್ಗಗಳನ್ನು ಸೃಷ್ಟಿಸುವ ರೀಟೇಲ್ ವ್ಯಾಪಾರದ ಪಾಲುದಾರಿಕೆಯ ಬದ್ಧತೆಗೆ ಸಾಕ್ಷಿಯಾಗಿದೆ. ದಕ್ಷಿಣ ಭಾರತದ ಕಿರಾಣಿ ಪಾಲುದಾರರ ಸರಾಸರಿ ಮಾಸಿಕ ಡೆಲಿವರಿ ಆದಾಯಗಳು ಅಭೂತಪೂರ್ವವಾಗಿ ಬೆಳವಣಿಗೆಯಾಗಿದ್ದರೆ, ನಂತರದಲ್ಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾರತದ ಕಿರಾಣಿ ಪಾಲುದಾರರಿದ್ದಾರೆ.

ಕಿರಾಣಿ ಪಾಲುದಾರರಲ್ಲಿ ಒಬ್ಬರಾಗಿರುವ ಸೋಮಶೇಖರ ರೆಡ್ಡಿ ಅವರು ಬೆಂಗಳೂರಿನಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಫ್ಲಿಪ್ ಕಾರ್ಟ್ ಕಿರಾಣಿ ಕಾರ್ಯಕ್ರಮದ ಭಾಗವಾಗಿದ್ದಾರೆ ಮತ್ತು ತಮ್ಮ ಕೌಶಲ್ಯವನ್ನು ಮತ್ತು ಗ್ರಾಹಕ ನಿರ್ವಹಣೆಯನ್ನು ಡಿಜಿಟಲ್ ಕೌಶಲ್ಯಗಳಿಗೆ ಪರಿವರ್ತಿಸಿಕೊಳ್ಳುವ ಮೂಲಕ ಗಳಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ.

Advertisement

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪ್ರದೇಶದಲ್ಲಿ ಅಮಿತ್ ಬೇಕರಿಯನ್ನು ನಡೆಸುತ್ತಿರುವ ಪ್ರಸಾದ್ ಮತ್ತು ಪ್ರಿಂಟ್ ಔಸ್ ಅನ್ನು ಹೊಂದಿರುವ ಸುರೇಶ್ ಫ್ಲಿಪ್ ಕಾರ್ಟ್ ನೊಂದಿಗೆ ಕಳೆದ ಎರಡು ವರ್ಷಗಳಿಂದ ಕಿರಾಣಿ ಪಾಲುದಾರರಾಗಿದ್ದಾರೆ.

ಕೋವಿಡ್-19 ನಂತಹ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎದುರಾದ ಸವಾಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಭಾರತೀಯರ ಜೀವನದ ಭಾಗವಾಗಿದೆ. ಈ ಇ-ಕಾಮರ್ಸ್ ಭಾರತೀಯರ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಅವರ ಮನೆಯ ಸುರಕ್ಷತೆಗೆ ಹೆಚ್ಚಿನ ನೆರವನ್ನು ನೀಡುತ್ತಿದೆ. ಫ್ಲಿಪ್ ಕಾರ್ಟ್ ಗ್ರೂಪ್ ನ ಪರ್ಯಾಯ ವಿತರಣಾ ಮಾದರಿಯಾಗಿ ಕಿರಾಣಿಗಳು ಸಂಯೋಜನೆಗೊಂಡಿರುವುದರಿಂದ ಕಿರಾಣಿ ಪಾಲುದಾರರಿಗೆ ಹೆಚ್ಚುವರಿ ಆದಾಯವನ್ನು ತಂದುಕೊಡುತ್ತದೆ. ಇದರಿಂದ ಅವರ ಕುಟುಂಬಗಳಿಗೆ ನೆರವಾಗುವುದರ ಜೊತೆಗೆ ಅವರ ಮಕ್ಕಳ ಶಿಕ್ಷಣ, ಸಾಲ ಮರುಪಾವತಿ ಮತ್ತು ವೈಯಕ್ತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ:ಉಪ ಚುನಾವಣೆಯ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸಲೀಂ ಅಹ್ಮದ್

ಹಬ್ಬದ ಸೀಸನ್ ಫ್ಲಿಪ್ ಕಾರ್ಟ್ ನ ಕಿರಾಣಿ ವಿತರಣಾ ಪಾಲುದಾರರಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಅತ್ಯದ್ಭುತವಾದ ಅವಕಾಶವನ್ನು ಒದಗಿಸುತ್ತದೆ ಮತ್ತು ಈ ಮೂಲಕ ಅವರ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಫ್ಲಿಪ್ ಕಾರ್ಟ್ ನ ಗ್ರಾಹಕರು ತಾವು ಮಾಡಿದ ಆರ್ಡರ್ ಗಳನ್ನು ಸಕಾಲದಲ್ಲಿ ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next