Advertisement

ಟಿ-ಶರ್ಟ್‌ ಮೇಲೆ ಸುಶಾಂತ್‌ ಸಿಂಗ್‌ ರಜಪೂತ್‌ ಫೋಟೋ: ಆಕ್ರೋಶ

08:46 PM Jul 27, 2022 | Team Udayavani |

ಮುಂಬೈ: ಬಾಲಿವುಡ್‌ನ‌ ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಫೋಟೋ ಇರುವ ಟಿ-ಶರ್ಟ್‌ಗಳನ್ನು ಮಾರಾಟ ಮಾಡಲು ಮುಂದಾದ ಫ್ಲಿಪ್‌ಕಾರ್ಟ್‌ ವಿರುದ್ಧ ಜನರು ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.

Advertisement

ಬಿಳಿ ಟಿ-ಶರ್ಟ್‌ ಮೇಲೆ ಸುಶಾಂತ್‌ ಸಿಂಗ್‌ ಫೋಟೋ. ಅದಕ್ಕೆ “ಡಿಪ್ರಶನ್‌ ಈಸ್‌ ಡ್ರೋನಿಂಗ್‌’ (ಮಾನಸಿಕ ಖಿನ್ನತೆಯು ಮುಳುಗಿಸಿದಂತೆ) ಎಂದು ಕೋಟ್‌ ಬರೆಯಲಾಗಿದೆ. ಈ ರೀತಿಯ ಟಿ-ಶರ್ಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ.
ಇದನ್ನು ಕಂಡೊಡನೆ ಸಿಟ್ಟಿಗೆದ್ದಿರುವ ನೆಟ್ಟಿಗರು, ಫ್ಲಿಪ್‌ಕಾರ್ಟ್‌ಗೆ ನಿಷೇಧಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಮೃತ ವ್ಯಕ್ತಿಯ ಫೋಟೋವನ್ನೇ ಮಾರುಕಟ್ಟೆ ಪ್ರಚಾರಕ್ಕೆ ಬಳಸಿಕೊಂಡಿರುವುದಕ್ಕೆ ಕಾನೂನಾತ್ಮಕವಾಗಿ ನೋಟಿಸ್‌ ಜಾರಿಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next