Advertisement

ಫ್ಲಿಪ್‍ ಕಾರ್ಟ್ ನಿಂದ ಕರಕುಶಲಕರ್ಮಿಗಳಿಗಾಗಿ ಸಮರ್ಥ್ ಮಾರಾಟ ಮೇಳ

04:54 PM Apr 17, 2022 | Team Udayavani |

ಬೆಂಗಳೂರು: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ 2 ನೇ ಆವೃತ್ತಿಯ ಸಮರ್ಥ್ ಮಾರಾಟ ಮೇಳ `ಕ್ರಾಫ್ಟೆಡ್ ಬೈ ಭಾರತ್’ಗೆ ಚಾಲನೆ ನೀಡಿದೆ.

Advertisement

ಫ್ಲಿಪ್ ಕಾರ್ಟ್ ನೊಂದಿಗೆ ಸಹಭಾಗಿತ್ವ ಹೊಂದಿರುವ  ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸ್ವ-ಸಹಾಯ ಗುಂಪುಗಳ ಮಹಿಳೆಯರು, ದಿವ್ಯಾಂಗರು, ಕರಕುಶಲಕರ್ಮಿಗಳು, ನೇಕಾರರು ಸೇರಿದಂತೆ ಇನ್ನಿತರೆ ವರ್ಗದವರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವ ಕುಶಲಕರ್ಮಿಗಳ ದಿನದ ಅಂಗವಾಗಿ ಈ ಮೇಳ ಆಯೋಜಿಸಲಾಗಿದೆ.

ಫ್ಲಿಪ್ ಕಾರ್ಟ್ ಸಮರ್ಥ್ ಮೂಲಕ ದೇಶದ ಲಕ್ಷಾಂತರ ಕುಶಲಕರ್ಮಿಗಳು, ನೇಕಾರರು, ಎಂಎಸ್ಎಂಇಗಳು ಮತ್ತು ಸಣ್ಣ ವ್ಯಾಪಾರಿಗಳು ವಿಸ್ತಾರವಾದ ಮಾರುಕಟ್ಟೆಯನ್ನು ಪ್ರವೇಶಿಸಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. `ಕ್ರಾಫ್ಟೆಡ್ ಬೈ ಭಾರತ್’ನ 2 ನೇ ಆವೃತ್ತಿಯಲ್ಲಿ 1 ಲಕ್ಷಕ್ಕೂ ಅಧಿಕ ಉತ್ಪನ್ನಗಳು ಮತ್ತು 220 ಕ್ಕೂ ಹೆಚ್ಚು ಕಲಾ ಮಾದರಿಗಳನ್ನು ಫ್ಲಿಪ್ ಕಾರ್ಟ್ ನಲ್ಲಿ 400 ಮಿಲಿಯನ್ ಗೂ ಹೆಚ್ಚು ಗ್ರಾಹಕರನ್ನು ತಲುಪಲಿವೆ.

ಈ ಸಮರ್ಥ್ ಮೇಳದಲ್ಲಿ ಕುಶಲಕರ್ಮಿಗಳು ಮತ್ತು ನೇಕಾರರು ಹಾಗೂ ಅವರು ಉತ್ಪಾದಿಸಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ವೀಕ್ಷಣೆಗೆ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಫ್ಲಿಪ್ ಕಾರ್ಟ್ ಸಮರ್ಥ್ ಗೆಂದೇ ಪ್ರತ್ಯೇಕವಾದ ಕ್ಯಾಮೆರಾ ಫಿಲ್ಟರ್ ಸೌಲಭ್ಯವನ್ನು ಒದಗಿಸುತ್ತಿದೆ. ಇದು ಆಂಡ್ರಾಯ್ಡ್ ಆಪ್ ಮೇಲೆ ಎಆರ್ ಅನುಭವವನ್ನು ಒದಗಿಸುವ ಸೇವೆಯಾಗಿದೆ ಮತ್ತು ಗ್ರಾಹಕರು ನೇಕಾರರು ಮತ್ತು ಕುಶಲಕರ್ಮಿಗಳ ಜತೆ ಸಂವಹನ ನಡೆಸಬಹುದಾಗಿದೆ. ಈ ಫಿಲ್ಟರ್ ಗ್ರಾಹಕರಿಗೆ ಉತ್ಪನ್ನದ ಸ್ಕ್ಯಾನ್ ಮಾಡುವುದು ಮತ್ತು ನೇರವಾಗಿ ಮಾರಾಟಗಾರರ ಸೈಟ್ ಗೆ ಸಂಪರ್ಕ ಕಲ್ಪಿಸುತ್ತದೆ.

ಮೊದಲ ಆವೃತ್ತಿಯಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ಮಾರಾಟಗಾರರು ತಮ್ಮ ಆದಾಯವನ್ನು 2 ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಅವರ ಉತ್ಪನ್ನಗಳ ಮಾರಾಟದಲ್ಲಿ ಗಮನಾರ್ಹವಾದ ಬೆಳವಣಿಗೆ ಆಗಿದ್ದು, ತಮ್ಮ ಉತ್ಪನ್ನಗಳನ್ನು ಲಕ್ಷಾಂತರ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next