Advertisement

ಕುಶಲಕರ್ಮಿಗಳು, ನೇಕಾರರ ಕರಕುಶಲ ವಸ್ತುಗಳ ಮಾರಾಟಕ್ಕೆ ಫ್ಲಿಪ್‍ ಕಾರ್ಟ್ “ಸಮರ್ಥ್’ ಯೋಜನೆ

03:52 PM Sep 30, 2021 | |

ಬೆಂಗಳೂರು: ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಲ್ಲೊಂದಾದ ಫ್ಲಿಪ್‌ಕಾರ್ಟ್ ತನ್ನ 8 ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್ ಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಫ್ಲಿಪ್‌ಕಾರ್ಟ್ ಸಮರ್ಥ್ ಯೋಜನೆಯಡಿ ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲ ತಯಾರಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರು ತಮ್ಮ ಜೀವನೋಪಾಯ ಮತ್ತು ವ್ಯವಹಾರವನ್ನು ಬೆಳವಣಿಗೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.

Advertisement

ಕುಶಲಕರ್ಮಿಗಳು ಮತ್ತು ನೇಕಾರರು ಹಬ್ಬದ ಸೀಸನ್ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರ ನೆಲೆಯನ್ನು ತಲುಪುವ ನಿಟ್ಟಿನಲ್ಲಿ ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾ ಎಂಬ ವಿನೂತನವಾದ ಪರಿಕಲ್ಪನೆಯಡಿಯಲ್ಲಿ ವಿಶೇಷವಾದ ಉತ್ಪನ್ನಗಳನ್ನು ಸಂಗ್ರಹಿಸಲಾಗಿದೆ.

ಸೇವೆ ಲಭ್ಯವಿಲ್ಲದವರಿಗೆ ಸೇವೆಯನ್ನು ಕಲ್ಪಿಸುವ, ದೇಶೀಯ ಸಮುದಾಯಗಳಿಗೆ ಸುಸ್ಥಿರವಾದ ಮತ್ತು ಅಂತರ್ಗತವಾದ ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ಈ ಫ್ಲಿಪ್‌ಕಾರ್ಟ್ ಸಮರ್ಥ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಸರ್ಕಾರಿ ಸಂಸ್ಥೆಗಳು ಹಾಗೂ ಜೀವನೋಪಾಯ ಕಲ್ಪಿಸುವ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಕಳೆದ ವರ್ಷದಿಂದ ಈ ಕಾರ್ಯಕ್ರಮದಡಿ ಮಾರಾಟದಲ್ಲಿ 7 ಪಟ್ಟು ಹೆಚ್ಚಾಗಿದೆ. 9.50 ಲಕ್ಷಕ್ಕೂ ಹೆಚ್ಚು ಜೀವನೋಪಾಯಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕಳೆದ ವರ್ಷ ಫ್ಲಿಪ್‌ಕಾರ್ಟ್‌ನ ಹಬ್ಬದ ಸೀಸನ್‌ನ ಭಾಗವಾಗಿದ್ದ ಕುಶಲಕರ್ಮಿಗಳು ತಮ್ಮ ಆದಾಯದಲ್ಲಿ 2.5 ಪಟ್ಟು ಹೆಚ್ಚಳ ಮಾಡಿಕೊಂಡಿರುವುದು ಗಮನಾರ್ಹವಾದ ಬೆಳವಣಿಗೆಯಾಗಿದೆ.

ಈ ವರ್ಷ, ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾ ದೇಶಾದ್ಯಂತ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ. ಇದರ ಮೂಲಕ ಅವರಿಗೆ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆ ಮತ್ತು ಅಧಿಕ ಪ್ರಾದೇಶಿಕ ಮಹತ್ವವನ್ನು ನೀಡಲಿದೆ.

ಇದನ್ನೂ ಓದಿ:ಹನಿವೆಲ್ ಬಿಡುಗಡೆ ಮಾಡಿದೆ ಎಸಿ ಕಂಟ್ರೋಲರ್, ವಿಡಿಯೋ ಕಣ್ಗಾವಲು ಹಾಗೂ ಹೊಗೆ ಪತ್ತೆ ಸಾಧನ

Advertisement

ಆರ್ಟ್ ಫಾರ್ಮ್ ಆಫ್ ಇಂಡಿಯಾ 28 ಉತ್ಪನ್ನಗಳನ್ನು ಹೊಂದಿದೆ. ದೇಶದ ಪಶ್ಚಿಮ ಭಾಗದ ಅತಿದೊಡ್ಡ ಎಂಪೋರಿಯಂಗಳಲ್ಲಿ ಒಂದಾಗಿರುವ ಗಾರ್ವಿ ಗರ್ಜರಿಯಂತಹ ಪಾಲುದಾರರಿಂದ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ರಾಜ್ಯಾದ್ಯಂತ 2,000 ಕ್ಕೂ ಹೆಚ್ಚು ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತದೆ. ಬುಡಕಟ್ಟು ಕಲ್ಯಾಣ ಸಚಿವಾಲಯದಿಂದ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆ ಒದಗಿಸುವ ಹೊಣೆಗಾರಿಕೆಯನ್ನು ಹೊಂದಿದೆ. ದೇಶಾದ್ಯಂತದ 3,50,000 ಆದಿವಾಸಿಗಳ ಮೇಲೆ ಇದು ಉತ್ತಮ ಪರಿಣಾಮ ಬೀರುತ್ತದೆ

ಇದರ ಜೊತೆಗೆ, ಫ್ಲಿಪ್‌ಕಾರ್ಟ್ ಕ್ಯಾಮೆರಾ ಮೂಲಕ ಫ್ಲಿಪ್‌ಕಾರ್ಟ್ 3ಡಿ ಮತ್ತು ಎಆರ್ ಸಾಮರ್ಥ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇದರ ಮೂಲಕ ಗ್ರಾಹಕರು ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾದಿಂದ ಉತ್ಪನ್ನಗಳನ್ನು ಶಾಪಿಂಗ್ ಮಾಡಬಹುದು. ಇದರ ಮೂಲಕ ಗ್ರಾಹಕರು ಆಯ್ದ ಕರಕುಶಲ ವಸ್ತುಗಳೊಂದಿಗೆ ಹ್ಯಾಂಡ್‌ಬ್ಯಾಗ್ ಮತ್ತು ಗೃಹಾಲಂಕಾರ ಉತ್ಪನ್ನಗಳ ಬಗ್ಗೆ ಸಂವಹನ ನಡೆಸಬಹುದು ಅಥವಾ ಅವುಗಳನ್ನು ತಮ್ಮ ಜಾಗದಲ್ಲಿಯೇ ಕುಳಿತು ವೀಕ್ಷಿಸಿ ಅವುಗಳ ಖರೀದಿ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next