ನವ ದೆಹಲಿ : ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ಸಂಸ್ಥೆ ಅದಾನಿ ಗ್ರೂಪ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಲಾಜಿಸ್ಟಿಕ್ ಮತ್ತು ಡಾಟಾ ಸೆಂಟರ್ ಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಹಾಗೂ 2,500ಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ದೃಷ್ಟಿಯಲ್ಲಿ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಮುಂದಾಗಿವೆ ಎಂದು ವರದಿಯಾಗಿದೆ.
ಈ ಪಾಲುದಾರಿಕೆಯ ಭಾಗವಾಗಿ, ಅದಾನಿ ಲಾಜಿಸ್ಟಿಕ್ಸ್ ಮುಂಬಯಿಯಲ್ಲಿರುವ ತನ್ನ ಮುಂಬರುವ ಲಾಜಿಸ್ಟಿಕ್ಸ್ 5,34,000 ಚದರ ಅಡಿ ಪೂರೈಸುವ ಕೇಂದ್ರವನ್ನು ನಿರ್ಮಿಸಲಿದ್ದು, ಪಶ್ಚಿಮ ಭಾರತದಲ್ಲಿ ಹೆಚ್ಚುತ್ತಿರುವ ಇ-ಕಾಮರ್ಸ್ ಗೆ ಬೇಡಿಕೆಯನ್ನು ಪೂರೈಸುವ ಫ್ಲಿಪ್ ಕಾರ್ಟ್‌ಗೆ ಗುತ್ತಿಗೆ ನೀಡಲಾಗುವುದು. ಈ ಹೊಸ ಉದ್ಯಮವು ಸಣ್ಣ, ಮಧ್ಯಮ ವರ್ಗ ಹಾಗೂ ಸಾವಿರಾರು ಮಾರಾಟಗಾರರಿಗೆ ಉತ್ತೇಜನಾತ್ಮಕವಾಗಿ ಪರಿಣಮಿಸಲಿದೆ.
ಇದನ್ನೂ ಓದಿ : ಯುಗಾದಿ ಅಂದರೇ, ಆರಂಭ ಅಷ್ಟೇ ಅಲ್ಲ..! ಹೊಸ ಶಕ್ತಿ ತುಂಬಿಸುವ ಸೂಚ್ಯ ದಿನ
ಇನ್ನು ಚೆನ್ನೈನಲ್ಲಿರುವ ಅದಾನಿ ಕಾನೆಕ್ಸ್ ನಲ್ಲಿ ಫ್ಲಿಪ್ ಕಾರ್ಟ್ ತನ್ನ ಮೂರನೇ ಡಾಟಾ ಸೆಂಟರ್ ನನ್ನು ಕೂಡ ನಿರ್ಮಿಸಲಿದ್ದು, ಇದು ಅದಾನಿ ಕಾನೆಕ್ಸ್ ಎಡ್ಜ್ ಕಾನೆಕ್ಸ್ ಮತ್ತು ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನಡುವಿನ ಹೊಸ ಜಂಟಿ ಉದ್ಯಮವಾಗಿದೆ.
ಗ್ರಾಹಕರಿಗೆ ತ್ವರಿತವಾಗಿ ಸೇವೆಯನ್ನು ಪೂರೈಸುವ ಉದ್ದೇಶದಿಂದ ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್ ನೊಂದಿಗೆ ಫ್ಲಿಪ್‌ಕಾರ್ಟ್, ಅದಾನಿ ಗ್ರೂಪ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ