Advertisement

ಕ್ಯೂ ಆರ್‌ ಕೋಡ್‌ ಆಧಾರಿತ ಪಾವತಿ ಆರಂಭಿಸಿದ ಫ್ಲಿಪ್ ಕಾರ್ಟ್..!

04:51 PM Jun 08, 2021 | Team Udayavani |

ನವ ದೆಹಲಿ : ದೇಶದ ಅತ್ಯಂತ ದೊಡ್ಡ ಆನ್ ಲೈನ್ ಮಾರುಕಟ್ಟೆ ಸಂಸ್ತೆ ಫ್ಲಿಪ್‌ ಕಾರ್ಟ್‌ ಕಂಪನಿಯು ಡಿಜಿಟಲ್ ಪಾವತಿಯಲ್ಲಿ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ.

Advertisement

ಫ್ಲಿಪ್‌ ಕಾರ್ಟ್‌ ಗ್ರಾಹ ಸ್ನೇಹಿ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಉತ್ಪನ್ನಗಳನ್ನು ಪಡೆದುಕೊಂಡ ನಂತರ ಹಣ ಪಾವತಿಸುವವರಿಗೆ ಇದು ಪ್ರಯೋಜನಕಾರಿ ಆಗಲಿದೆ.

ಉತ್ಪನ್ನವು ಕೈಗೆ ಸಿಕ್ಕಿದ ನಂತರ ಹಣ ಪಾವತಿಸುವ ಆಯ್ಕೆಯನ್ನು (ಕ್ಯಾಶ್ ಆನ್‌ ಡೆಲಿವರಿ) ಪಡೆದವರಿಗೆ ಉಪಯೋಗವಾಗುವಂತೆ ಫ್ಲಿಪ್ ಕಾರ್ಟ್ ಈ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಇದನ್ನೂ ಓದಿ : ಕಿಞ್ಞಣ್ಣ ರೈ 106ನೇ ಜನ್ಮದಿನಾಚರಣೆ : ಕಯ್ಯಾರರ ಕುಟುಂಬಕ್ಕೆ ಕೋವಿಡ್ ಕಿಟ್ ವಿತರಣೆ

ಹೌದು, ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಗ್ರಾಹಕರಿಗೆ ಸುಲಭವಾಗುವಂತೆ  ಕ್ಯೂ ಆರ್‌ ಕೋಡ್‌ ಆಧಾರಿತ ಪಾವತಿ ಸೌಲಭ್ಯವನ್ನು ಜಾರಿಗೆ ತಂದಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಫ್ಲಿಪ್ ಕಾರ್ಟ್ ಸಂಸ್ಥೆ,  ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ, ಯುಪಿಐ ಸೌಲಭ್ಯ ಇರುವ ಯಾವುದೇ ಆ್ಯಪ್ ಮೂಲಕ ಹಣ ಪಾವತಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಯಸುವ ಸಂದರ್ಭದಲ್ಲಿ ಈ ಬಗೆಯ ಪಾವತಿ ವ್ಯವಸ್ಥೆಯು ಹೆಚ್ಚಿನ ಸುರಕ್ಷತೆಯದ್ದಾಗಿರುತಂದೆ ಎಂಬ ಕಾರಣದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ: ಕೋವಿಡ್ 19 ನಿರ್ವಹಣೆಗೆ ಮೆಚ್ಚುಗೆ

Advertisement

Udayavani is now on Telegram. Click here to join our channel and stay updated with the latest news.

Next