Advertisement

ಬಿಬಿಸಿ ರೇಡಿಯೋ ಜಾಕಿಗೆ ಫ್ಲಿಂಟಾಫ್ ಭಾಂಗ್ರಾ ಪಾಠ!

01:43 AM May 12, 2019 | Sriram |

ಲಂಡನ್‌: ಇಂಗ್ಲೆಂಡ್‌ನ‌ಲ್ಲೀಗ ವಿಶ್ವಕಪ್‌ ಕ್ರಿಕೆಟ್‌ ಹವಾ ಜೋರಾಗಿಯೇ ಬೀಸತೊಡಗಿದೆ. ವಿವಿಧ ರಾಷ್ಟ್ರಗಳ ಅಭಿಮಾನಿಗಳು ಈಗಾಗಲೇ ಇಲ್ಲಿ ಬೀಡುಬಿಟ್ಟಿದ್ದಾರೆ. ಇದರಲ್ಲಿ ಟೀಮ್‌ ಇಂಡಿಯಾವನ್ನು ಬೆಂಬಲಿಸುವ “ಭಾರತ್‌ ಆರ್ಮಿ’ ಸದಸ್ಯರೂ ಸೇರಿದ್ದಾರೆ.

Advertisement

ಈ ಕ್ರಿಕೆಟ್‌ ಅಭಿಮಾನಿಗಳನ್ನೆಲ್ಲ ಬಿಬಿಸಿ ರೇಡಿಯೋ ಜಾಕಿ ಕ್ರಿಸ್‌ ಸ್ಟಾರ್ಕ್‌ ಅವರಿಗೆ ಪರಿಚಯಿಸುವ ಕೆಲಸದಲ್ಲಿ ತೊಡಗಿದವರು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಆ್ಯಂಡ್ರೂé ಫ್ಲಿಂಟಾಫ್. ಈ ಸಂದರ್ಭದಲ್ಲಿ ಅವರು “ಭಾರತ್‌ ಆರ್ಮಿ’ಯನ್ನೂ ಸ್ಟಾರ್ಕ್‌ಗೆ ಪರಿಚಯಿ ಸಿದ್ದಾರೆ. ಆಗ ಧೋಲ್‌ ಮತ್ತು ಭಾಂಗ್ರಾ ನೃತ್ಯದ ಹೆಜ್ಜೆಗಳನ್ನು ಹೇಳಿಕೊಟ್ಟಿದ್ದಾರೆ. ಭಾರತ್‌ ಆರ್ಮಿಯ ಮುಖ್ಯಸ್ಥ ರಕ್‌Ò ಪಟೇಲ್‌ ಈ ಸಂದರ್ಭದಲ್ಲಿ ಸಾಥ್‌ ನೀಡಿದರು.

ಇಂಥದೊಂದು ರಂಜನೀಯ ವಾತಾ ವರಣದ ಕುರಿತು ಪ್ರತಿಕ್ರಿಯಿಸಿದ ಕ್ರಿಸ್‌ ಸ್ಟಾರ್ಕ್‌, “ಭಾರತೀಯ ಅಭಿಮಾನಿಗಳ ತಂಡ ನನ್ನನ್ನು ಹಾಡುವಂತೆ, ಡ್ಯಾನ್ಸ್‌ ಮಾಡುವಂತೆ ಉತ್ತೇಜಿಸುತ್ತಲೇ ಇತ್ತು. ನಾನು ಇದೆರಡನ್ನೂ ಹತ್ತೇ ನಿಮಿಷಗಳಲ್ಲಿ ಕಲಿತು ಪ್ರದರ್ಶಿಸಿದೆ’ ಎಂದಿದ್ದಾರೆ. ಈ ನೃತ್ಯದ ವೀಡಿಯೋ ಭಾರೀ ಜನಪ್ರಿಯಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next