Advertisement

ದೇಶೀಯ ವಿಮಾನ ಪ್ರಯಾಣ ಟಿಕೆಟ್‌ ದರಕ್ಕಿದ್ದ ಮಿತಿ ತೆಗೆದ ಸರ್ಕಾರ

08:54 PM Aug 10, 2022 | Team Udayavani |

ನವದೆಹಲಿ: ದೇಶದ ಎಲ್ಲ ಏರ್‌ಲೈನ್‌ಗಳ ವಿಮಾನ ಸೇವೆಗಳ ದೇಶೀಯ ವಿಮಾನ ಪ್ರಯಾಣ ಟಿಕೆಟ್‌ಗಳ ಮೇಲೆ ಕೇಂದ್ರ ಸರ್ಕಾರವು ಕೊರೊನಾ ಸಮಯದಲ್ಲಿ ವಿಧಿಸಿದ್ದ ಮಿತಿಯನ್ನು ತೆಗೆದುಹಾಕಿದೆ. ಆ. 31ರ ನಂತರ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದರಿಂದಾಗಿ ಏರ್‌ಲೈನ್‌ಗಳು ವಿಮಾನದ ಟಿಕೆಟ್‌ ದರವನ್ನು ಯಾವುದೇ ಹಸ್ತಕ್ಷೇಪವಿಲ್ಲದೆ ತಾವೇ ನಿರ್ಧರಿಸಬಹುದಾಗಿದೆ.

Advertisement

ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿಮಾನಯಾನ ಸಚಿವಾಲಯದ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, “ಪ್ರಯಾಣಿಕರು ಮತ್ತು ಏರ್‌ಲೈನ್‌ಗಳ ಬೇಡಿಕೆ, ವಿಮಾನದ ಇಂಧನದ ಬೆಲೆ ಏರಿಕೆ ಹಾಗೂ ಇನ್ನಿತರ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ. ಸರ್ಕಾರವು ಟಿಕೆಟ್‌ ದರದ ಮಿತಿಯನ್ನು ತೆಗೆದುಹಾಕಿರುವುದರಿಂದ ಏರ್‌ಲೈನ್‌ಗಳಿಗೆ ಪ್ರಯಾಣಿಕರಿಗೆ ರಿಯಾಯಿತಿ ಕೊಡಲು ಅವಕಾಶವಾಗಿದ್ದು, ಇದರಿಂದ ಪ್ರಯಾಣಿಕರಿಗೆ ಉಳಿತಾಯವೇ ಆಗಲಿದೆ ಎಂದಿವೆ ಹಲವು ಏರ್‌ಲೈನ್‌ಗಳು.

ಕೊರೊನಾ ಸಮಯದಲ್ಲಿ ವಿಮಾನ ಪ್ರಯಾಣಕ್ಕೆ ನಿರ್ಬಂಧವಿದ್ದ ಹಿನ್ನೆಲೆ, ಏರ್‌ಲೈನ್‌ಗಳು ಟಿಕೆಟ್‌ ದರ ಹೆಚ್ಚಿಸಬಹುದೆನ್ನುವ ಕಾರಣಕ್ಕೆ ಸರ್ಕಾರವು ವಿಮಾನ ಪ್ರಯಾಣದ ಸಮಯ ಮತ್ತು ದೂರಕ್ಕನುಗುಣವಾಗಿ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿ ಪಡಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next