ಒಂದೂರಿನಲ್ಲಿ ರಾಜ ಒಂದು ಸ್ಪರ್ಧೆಯನ್ನು ಏರ್ಪಡಿಸಿದ. ನಾಯಿಯ ಡೊಂಕು ಬಾಲವನ್ನು ನೇರವಾಗಿಸಬೇಕು. ಈ ಸ್ಪರ್ಧೆಯನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ಇಂಥ ವಿಚಿತ್ರವಾದ ಸ್ಪರ್ಧೆಯನ್ನು ಎಲ್ಲರೂ, ಯಾರೂ ಕೇಳಿರಲಿಲ್ಲ. ಹೀಗಿದ್ದೂ ಹಲವಾರು ಮಂದಿ ಸ್ಪರ್ಧೆಗೆ ತಮ್ಮ ಹೆಸರು ನೋಂದಾಯಿಸಿದರು. ಜನರು ಅನೇಕ ಕಸರತ್ತುಗಲನ್ನು ಮಾಡತೊಡಗಿದರು. ನಾಯಿ ಬಾಲಕ್ಕೆ ಪಟ್ಟಿ ಕಟ್ಟುವುದು, ಕೋಲು ಕಟ್ಟುವುದು ಕೊಳವೆಯೊಳಗೆ ಬಾಲ ತೂರಿಸುವುದು. ಹೀಗೆ ಏನೆಲ್ಲಾ ಸಾಧ್ಯವೋ ಅವೆಲ್ಲಾ ಮಾರ್ಗಗಳನ್ನು ಉಪಯೋಗಿಸತೊಡಗಿದರು. ಕಡೆಯ ದಿನ ಬಂದಿತು. ಯಾರೂ ನಾಯಿಯ ಬಾಲ ಡೊಂಕಾಗಿಸುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಒಬ್ಬ ಹುಡುಗ ಮಾತ್ರ ಯಶಸ್ವಿಯಾಗಿದ್ದ. ಅವನ ನಾಯಿ ತುಂಬಾ ಬಡಕಲಾಗಿತ್ತು. ರಾಜ “ನಾಯಿ ಬಾಲವನ್ನು ಹೇಗೆ ನೇರವಾಗಿಸಿದೆ?’ ಎಂದು ಕೇಳಿದಾಗ ಹುಡುಗ ಹೇಳಿದನು. “ಮಹಾಪ್ರಭು, ಹೊಟ್ಟೆಗೆ ಅನ್ನ, ಜೇಬು ತುಂಬಾ ದುಡ್ಡು ಇದ್ದುಬಿಟ್ಟರೆ ನಾಯಿಯ ಬಾಲ ಮನುಷ್ಯನ ಥರ ಆಗಿಬಿಡುತ್ತೆ. ಹಾಗಾಗಿ ಈ ನಾಯಿಗೆ ಆಹಾರ ನೀರು ಏನೊಂದೂ ನೀಡಲಿಲ್ಲ.
ಈಗ ಅದಕ್ಕೆ ಬಾಲವನ್ನು ಎತ್ತಲೇ ಶಕ್ತಿ ಇಲ್ಲ. ಹೀಗಾಗಿ ಅದು ನೇರವಾಗಿದೆ’ ಎಂದನು. ರಾಜ ಹುಡುಗನ ಮಾತಿಗೆ ತಲೆದೂಗಿ ಅವನನ್ನು ಅರಮನೆಗೆ ಕರೆದು ಸನ್ಮಾನಿಸಿದನು.
– ಆರಿಫ್ ವಾಲೀಕಾರ್