Advertisement

ಆಡಳಿತ ಸೇವೆಗೆ ಪಂಚ ಸೋದರಿಯರು

12:08 AM Jul 16, 2021 | Team Udayavani |

ಹೊಸದಿಲ್ಲಿ: ರಾಜಸ್ಥಾನದಲ್ಲಿ ಅತ್ಯಂತ ವಿಶೇಷ ಘಟನೆಯೊಂದು ನಡೆದಿದೆ. ಅಲ್ಲಿನ ಹನುಮಾನಗಢದ ಒಂದೇ ಕುಟುಂಬಕ್ಕೆ ಸೇರಿದ ಐವರೂ ಸಹೋದರಿಯರು ರಾಜಸ್ಥಾನದ ಆಡಳಿತಾತ್ಮಕ ಸೇವಾ ಪರೀಕ್ಷೆ­ಗಳಲ್ಲಿ ಉತ್ತೀರ್ಣರಾಗಿದ್ದಾರೆ!

Advertisement

ಈಗಾಗಲೇ ಇಬ್ಬರು ಸೇವೆಯಲ್ಲೂ ಇದ್ದಾರೆ. ಇತ್ತೀ ಚೆಗೆ ಬಿಡುಗಡೆಯಾದ ಹೊಸಪಟ್ಟಿಯಲ್ಲಿ ಹೊಸ ತಾಗಿ ಮೂವರು ಉತ್ತೀರ್ಣ­ರಾಗುವು­ದರಿಂದ ಒಟ್ಟೂ ಐದೂ ಮಂದಿ ಆಡಳಿತಾತ್ಮಕ ಸೇವೆಗೆ ಸೇರಿದಂತಾಗಿದೆ.

ಬಹುಶಃ ಇದು ರಾಜಸ್ಥಾನ ಇತಿಹಾಸದಲ್ಲೇ ಅಪೂರ್ವ ಉದಾಹರಣೆ! ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್‌ ಕಾಸ್ವಾನ್‌ ಈ ವಿಚಾರವನ್ನು ಟ್ವೀಟ್‌ ಮೂಲಕ ಬಹಿರಂಗಪಡಿಸಿದ್ದಾರೆ. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next