ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ನೇಮಕ ಮಾಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ಸೂಚನೆಯಂತೆ ಒಟ್ಟು ಐವರ ಹೆಸರನ್ನು ಕಳುಹಿಸಲಾಗಿದೆ.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಮೂವರ ಹೆಸರು ಸೂಚಿಸುವಂತೆ ರಾಜ್ಯ ಕಾಂಗ್ರೆಸ್‌ನಿಂದ ಸೂಚನೆ ಬಂದಿದ್ದು, ಚರ್ಚಿಸಲಾದ ಮೂವರ ಹೆಸರಲ್ಲದೆ ಇನ್ನೂ ಇಬ್ಬರು
ಆಕಾಂಕ್ಷಿಗಳ ಹೆಸರನ್ನೂ ಕಳುಹಿಸಲಾಗಿದೆ.
ಸದ್ಯ ಮಾಹಿತಿಯಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಮೇಯರ್ ಶಶಿಧರ ಹೆಗ್ಡೆ ಹಾಗೂ ಪೃಥ್ವಿರಾಜ್ ರೈ ಅವರ ಹೆಸರು ಅಂತಿಮಗೊಂಡಿದೆ. ಇವರಲ್ಲದೆ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ಪೂಜಾರಿ ಅವರ ಹೆಸರೂ ಸೇರ್ಪಡೆಯಾಗಿವೆ.