ಲಕ್ನೋ: ಭಾರತದಲ್ಲಿ ಕಳೆದ ಕೆಲ ಸಮಯದಿಂದ ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶದ ಪ್ರಜೆಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ, ಯುಪಿ ಪೊಲೀಸರು ಆಗ್ರಾದ ತಾಜ್‌ಗಂಜ್ ಟೋರಾ ಚೌಕಿ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಇಬ್ರಾಹಿಂ ಶೇಖ್, ಮೊಹಮ್ಮದ್ ಅಜೀಜುರ್ ಗಾಜಿ, ರಾಜು ಶೇಖ್, ಜನ್ನತ್ ಬೇಗಂ ಮತ್ತು ಮುಕ್ತಾ ಶೇಖ್ ಬಂಧಿತರು. ಕಳೆದ ಮೂರು ವರ್ಷಗಳಿಂದ ಇವರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಕಲಿ ಆಧಾರ್ ಕಾರ್ಡ್‌ಗಳು, ಬಾಂಗ್ಲಾದೇಶದ ಪಾಸ್‌ಪೋರ್ಟ್‌ಗಳು, ರೈಲ್ವೇ ಟಿಕೆಟ್,ಮೊಬೈಲ್ ಫೋನ್ ಮತ್ತು ಬಾಂಗ್ಲಾದೇಶಿ ಐಡಿಗಳನ್ನು ಪೊಲೀಸರು ಬಂಧಿತರಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಅಜೀಜುರ್ ಗಾಜಿ ಮತ್ತು ಆಕೆಯ ಪತ್ನಿ ಜನ್ನತ್ ಇತರ ವಲಸಿಗರನ್ನು ನೋಡಿಕೊಳ್ಳುತ್ತಿದ್ದರು. ದಂಪತಿಗಳು ಹಣವನ್ನು ಪಡೆದು ಅಕ್ರಮ ವಲಸಿಗರನ್ನು ಗಡಿಯೊಳಗೆ ತಲುಪಿಸುವ ದಂಧೆಯನ್ನು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Related Articles