Advertisement

ಬಸ್ಸು ಹರಿದು ಐವರು ಕನ್ವರಿಯಾಗಳಿಗೆ ಗಾಯ; ಓರ್ವ ಗಂಭೀರ

12:08 PM Sep 11, 2018 | Team Udayavani |

ಗೊಂಡಾ : ಗೊಂಡಾ-ಫೈಜಾಬಾದ್‌ ರಸ್ತೆಯಲ್ಲಿ ಬಸ್‌ ಹರಿದ ಕಾರಣ ಐವರು ಕನ್ವರಿಯಾಗಳು (ಶಿವಭಕ್ತರು) ಗಾಯಗೊಂಡಿರುವುದಾಗಿ ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ.

Advertisement

ಕನ್ವರಿಯಾಗಳು ಅಯೋಧ್ಯೆಯ ಸರಯೂ ನದಿಯಿಂದ ನೀರನ್ನು ತೆಗೆದುಕೊಂಡು ಜಲಾಭಿಷೇಕ ಕ್ಕಾಗಿ ಪ್ರಥ್ವಿನಾಥ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಸೋಮವಾರ ರಾತ್ರಿ  ಈ ಅಪಘಾತ ಸಂಭವಿಸಿದೆ. 

ಗಾಯಾಳು ಕನ್ವರಿಯಾಗಳ ಪೈಕಿ ನಾಲ್ವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಒಬ್ಟಾತನಿಗೆ ಗಂಭೀರ ಗಾಯಗಳಾಗಿವೆ, ಬಸ್‌ ಚಾಲಕನನ್ನು ಬಂಧಿಸಲಾಗಿದೆ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next