Advertisement

ಚೆನ್ನೈ:ರೈಲು ನಿಲ್ದಾಣದಲ್ಲಿ ನೂಕು ನುಗ್ಗಲು;5 ಬಲಿ,ಹಲವರಿಗೆ ಗಾಯ 

12:25 PM Jul 24, 2018 | Team Udayavani |

ಚೆನ್ನೈ: ಸೈಂಟ್‌ ಮೌಂಟ್‌ ರೈಲು ನಿಲ್ದಾಣದಲ್ಲಿ ರೈಲು ಏರುವಾಗ ನೂಕುನುಗ್ಗಲು ಉಂಟಾಗಿ ಐವರು ಸಾವನ್ನಪ್ಪಿ, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಅವಘಡ ಮಂಗಳವಾರ ಬೆಳಗ್ಗೆ ಸಂಭವಿಸಿದೆ. 

Advertisement

ಕಿಕ್ಕಿರಿದ ಜನಸಂದಣಿ ರೈಲು ಏರಲು ಸಿದ್ದವಾಗಿತ್ತು, ಈ ವೇಳೆ ರೈಲು ಚಲಿಸಿದಾಗ ಫ‌ುಟ್‌ ಬೋರ್ಡ್‌ನಲ್ಲಿದ್ದ  ಮೂವರು ಕಂಬಗಳಿಗೆ ಗುದ್ದಿ ಕೆಳ ಬಿದ್ದು ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. 

ಚೆನ್ನೈ ಬೀಚ್‌- ತಿರುಮಲ್‌ಪುರ್‌ ಉಪನಗರ ರೈಲಿನಲ್ಲಿ  ಬೆಳಗ್ಗೆ 8.30 ರ ವೇಳೆಗೆ ಅವಘಡ ಸಂಭವಿಸಿದೆ. 

ಗಾಯಾಳುಗಳ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next