Advertisement

ಮುಂಬಯಿ ಗೋವಂಡಿಯಲ್ಲಿ ದಂಪತಿ ಮೇಲೆ ಗುಂಡು : ಐವರು ಅರೆಸ್ಟ್‌

04:53 PM Jun 09, 2018 | udayavani editorial |

ಮುಂಬಯಿ : ನಗರ ಹೊರವಲಯದ ಗೋವಂಡಿಯಲ್ಲಿನ ಆರೆಂಜ್‌ ಮಿಂಟ್‌ ಕಫೆಯಲ್ಲಿ ಊಟ ಮಾಡುತ್ತಿದ್ದ ದಂಪತಿ ರಾಕೇಶ್‌ ಸೋನಾವನೆ ಮತ್ತು ಶ್ವೇತಾ ಪಾಂಡೆ ಅವರ ಮೇಲೆ ಇಂದು ಶನಿವಾರ ನಸುಕಿನ 2 ಗಂಟೆಯ ಸುಮಾರಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಪೊಲೀಸರು ತಿಳಿಸಿರುವ ಪ್ರಕಾರ ಸಯಾನ್‌ ನಿವಾಸಿ ದಂಪತಿ,  ನವೀ ಮುಂಬಯಿಯ ನಿತಿನ್‌ ಅಹುಜಾ ಎಂಬವರಿಂದ ಕಾರೊಂದನ್ನು ಖರೀದಿಸಿದ್ದರು. ಆದರೆ ಅದರ ಹಣವನ್ನು ಪಾವತಿಸಿರಲಿಲ್ಲ. ಅಹುಜಾ ಅವರು ತಮ್ಮ ಪತ್ನಿ ಮತ್ತು ಕೆಲವು ಸ್ನೇಹಿತರೊಂದಿಗೆ ಅದೇ ಹೊಟೇಲ್‌ಗೆ ಬಂದು ದಂಪತಿ ಜತೆ ಹಣಕ್ಕಾಗಿ ಜಗಳವಾಡಿ ಕೊನೆಗೆ ಎರಡು ಸುತ್ತು ಗುಂಡು ಹಾರಿಸಿದರು. ಆದರೆ ಗುಂಡು ಹಾರಾಟದಲ್ಲಿ ಯಾರೂ ಗಾಯಗೊಳ್ಳಲಿಲ್ಲ. 

ಗುಂಡು ಹಾರಾಟದಿಂದ ಹೊಟೇಲಲ್ಲಿ ಇದ್ದ ಇತರರು, ಹೊರಗಿನವರು ಭೀತರಾದರು. ಅದೇ ವೇಳೆ ಹೊರಗೆ ಗಸ್ತು ತಿರುಗುತ್ತಿದ್ದ ಪೊಲೀಸ್‌ ತಂಡ ಗುಂಡಿನ ಸದ್ದು ಕೇಳಿ ಹೊಟೇಲ್‌ ಒಳಗೆ ಬಂದು ಆರೋಪಿ ಅಹುಜಾ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ತೆಗೆದುಕೊಂಡಿತು. ಅಂತೆಯೇ ಅಹುಜಾ ಬಳಿ ಇದ್ದ ಪರವಾನಿಗೆ ರಹಿತವಾದ 7.65 ಎಂ ಎಂ ನಾಡ ಪಿಸ್ತೂಲನ್ನು ಕೂಡ ವಶಕ್ಕೆ ತೆಗೆದುಕೊಂಡು ಕೊಲೆ ಯತ್ನ, ಸುಲಿಗೆ, ದೊಂಬಿ ಕೃತ್ಯದ ಕೇಸು ದಾಖಲಿಸಿಕೊಂಡರು. 

ಬಂಧಿತರನ್ನು ನಾಳೆ ಕೋರ್ಟಿಗೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next