Advertisement

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

07:20 PM Oct 18, 2021 | Team Udayavani |

ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡು ಮನೆ ಕಳವು ಮಾಡುತ್ತಿದ್ದ ನಾಲ್ವರು ಸೆಕ್ಯೂರಿಟಿ ಗಾರ್ಡ್‌ ಸೇರಿ ಐವರು ಆರೋಪಿಗಳನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

Advertisement

ನೇಪಾಳ ಮೂಲದ ಮೀನಾ ರಾಜ್‌ ಭಟ್‌(37), ಆತನ ಸಹೋದರ ತುಲರಾಮ್‌ ಭಟ್‌(33),  ನಾರಾಯಣ ಶ್ರೇಷ್ಟ(46), ಶಿವ ಭಂಡಾರಿ(37) ಮತ್ತು ಗೋವಿಂದಪುರ ನಿವಾಸಿ ಸಲೀಂ ಪಾಷಾ(24) ಬಂಧಿತರು. ಆರೋಪಿಗಳಿಂದ 10,89,700 ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣ, 1290 ಗ್ರಾಂ ಬೆಳ್ಳಿಯ ವಸ್ತುಗಳು, ಎಂಟು ವಿದೇಶಿ ಕರೆನ್ಸಿಗಳು, 12,000 ರೂ. ನಗದು, ಒಂದು ಕಾರು, ಬೈಕ  ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆರೋಪಿಗಳ ಬಂಧನದಿಂದ ಮೂರು ಕನ್ನ ಕಳವು ಪ್ರಕರಣಗಲು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಸಲೀಂ ಪಾಷಾ ಹಳೇ ಆರೋಪಿಯಾಗಿದ್ದು, ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಇತರೆ ಆರೋಪಿಗಳಾದ ನೇಪಾಳದವರು ಗೋವಿಂದಪುರ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದಾರೆ. ಈ ಮಧ್ಯೆ ಸಲೀಂ ಪಾಷಾನ ಪರಿಚಯವಾಗಿದ್ದು, ಈತನ ನೇಪಾಳ ಮೂಲದವರಿಗೆ ಇಂತಿಷ್ಟು ಕಮಿಷನ್‌ ಕೊಡುವುದಾಗಿ ಹೇಳಿ ಕೃತ್ಯಕ್ಕೆ ಸಹಕಾರ ನೀಡುವಂತೆ ಕೋರುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ತಾವು ಕೆಲಸ ಮಾಡುವ ಮನೆ ಮಾಲೀಕರ ಚಟುವಟಿಕೆಗಳು ಮತ್ತು ಮನೆಯ ನಕಲಿ ಕೀಗಳನ್ನು ಸಂಗ್ರಹಿಸುತ್ತಿದ್ದರು. ಮನೆಯವರು ಕಾರ್ಯ ನಿಮಿತ್ತ ಹೊರಗಡೆ ಅಥವಾ ಊರಿಗೆ ಹೋದಾಗ ಸಲೀಂ ಪಾಷಾನಿಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಪಾಷಾ, ನಕಲಿ ಕೀ ಬಳಸಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಬಂದ ಹಣದಲ್ಲಿ ಮೋಜು-ಮಸ್ತಿಗಾಗಿ ಹಣ ವ್ಯಯಿಸುತ್ತಿದ್ದರು. ಬಾಕಿ ಹಣವನ್ನು ನೇಪಾಳದಲ್ಲಿರುವ ತಮ್ಮ ಸಂಬಂಧಿಗಳಿಗೆ ಆಗಾಗ್ಗೆ ಹೋಗಿ ಕೊಟ್ಟಿ ಬರುತ್ತಿದ್ದರು ಎಂದು ಪೊಲೀಸರತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಲೀಂ ಪಾಷಾನಿಂದ ಕಮಿಷನ್‌ ಲೆಕ್ಕದಲ್ಲಿ ನಗದು,ಚಿನ್ನಾಭರಣ ಪಡೆಯುತ್ತಿದ್ದ ಭದ್ರತಾ ಸಿಬ್ಬಂದಿ ಇತ್ತೀಚೆಗೆ ಕೃತ್ಯ ಎಸಗಿ ನೇಪಾಳಕ್ಕೆ ಪರಾರಿಯಾಗುತ್ತಿದ್ದರು. ಈ ಮಾಹಿತಿ ಪಡೆದ ಗೋವಿಂದಪುರ ಠಾಣೆ ಇನ್‌ಸ್ಪೆಕ್ಟರ್‌ ಆರ್‌.ಪ್ರಕಾಶ್‌ ಮತ್ತು ಪಿಎಸ್‌ಐ ಇಮ್ರಾನ್‌ ಅಲಿ ಖಾನ್‌ ನೇತೃತ್ವದ ತಡೆ ಗಡಿಯಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next