ಹೊಸದಿಲ್ಲಿ : ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಕಳೆದ ತ್ತೈಮಾಸಿಕದಲ್ಲಿ ಶೇ.6.7ಕ್ಕೆ ನೆಗೆಯುವ ಮೂಲಕ ಆಶಾದಾಯಕ ಚೇತರಿಕೆಯ ಲಕ್ಷಣಗಳನ್ನು ತೋರಿದ ಬೆನ್ನಿಗೇ ಇದೀಗ ಫಿಚ್ ರೇಟಿಂಗ್ ಸಂಸ್ಥೆ ಹಾಲಿ ಹಣಕಾಸು ವರ್ಷದಲ್ಲಿನ ಭಾರತದ ಜಿಡಿಪಿ ಬೆಳವಣಿಗೆಯ ಶೇ.6.9ರ ಅಂದಾಜನ್ನು ಶೇ.6.7ಕ್ಕೆ ಇಳಿಸಿದೆ.
ಭಾರತದ ಆರ್ಥಿಕತೆ ನಿರೀಕ್ಷೆಗಿಂತಲೂ ದುರ್ಬಲವಾಗಿ ಪುಟಿದಿರುವುದು ನಿರಾಶಾದಾಯಕವಾಗಿದೆ ಎಂದು ಹೇಳುವ ಮೂಲಕ ಫಿಚ್, ಭಾರತಕ್ಕೆ ಶಾಕ್ ಕೊಟ್ಟಿದೆ.
ಮಾತ್ರವಲ್ಲದೆ ಪಿಚ್ ರೇಟಿಂಗ್ ಸಂಸ್ಥೆ 2018-19ರ ಹಣಕಾಸು ವರ್ಷದ ಶೇ.7.4ರ ಜಿಡಿಪಿ ಅಂದಾಜನ್ನು ಶೇ.7.3ಕ್ಕೆ ಇಳಿಸಿದೆ. ಈ ಅಂದಾಜನ್ನು ಫಿಚ್ ಸೆಪ್ಟಂಬರ್ ತಿಂಗಳ ಜಾಗತಿಕ ಆರ್ಥಿಕ ಹೊರನೋಟ (ಜಿಇಓ)ದಲಿಲ ಮಾಡಿತ್ತು.
ಹಾಗಿದ್ದರೂ ಭಾರತದ ಜಿಡಿಪಿ ಬೆಳವಣಿಗೆಯು ಮುಂದಿನೆರಡು ವರ್ಷಗಳಲ್ಲಿ ಮತ್ತು ಚುರುಕನ್ನು ಪಡಯಲಿದೆ ಎಂದು ಫಿಚ್ ಹೇಳಿದೆ. ಇದಕ್ಕೆ ಜಾಗತಿಕ ಸಂರಚನಾ ಸುಧಾರಣೆಗಳ ವಿಷಯ ಸೂಚಿಯ ಅನುಷ್ಠಾನ ಮತ್ತು ವಿನಿಯೋಗಿಸಬಹುದಾದ ನೈಜ ಆದಾಯದಲ್ಲಿನ ಹೆಚ್ಚಳವು ಪೂರಕವಾದೀತು ಎಂದು ಫಿಚ್ ಹೇಳಿದೆ.
ಫಿಚ್ ಹೇಳಿರುವ ಪ್ರಕಾರ ಭಾರತದ ಆರ್ಥಿಕತೆಯು ಜುಲೈ – ಸೆಪ್ಟಂಬರ್ 3ನೇ ತ್ತೈಮಾಸಿಕದಲ್ಲಿ ಏರುಗತಿಯನ್ನು ಕಂಡಿದೆ; 2017ರಲ್ಲಿ ಶೇ.5.7ಕ್ಕೆ ಕುಸಿದಿದ್ದ ದೇಶದ ಜಿಡಿಪಿಯು ವಾರ್ಷಿಕ ನೆಲೆಯಲ್ಲಿ ಶೇ.6.3ಕ್ಕೆ ಜಿಗಿದಿದೆ.