Advertisement

MS Dhoni: ಬ್ಯಾಡ್ಮಿಂಟನ್‌ ಆಡುತ್ತಿರುವ ಧೋನಿ ವಿಡಿಯೋ ವೈರಲ್‌

10:11 PM Aug 24, 2024 | Team Udayavani |

ರಾಂಚಿ: ಬಿಡುವಿನಲ್ಲಿರುವ ಕೂಲ್‌ ಕ್ಯಾಪ್ಟನ್‌ ಎಂ.ಎಸ್‌.ಧೋನಿ, ಸ್ನೇಹಿತರ ಜೊತೆಗೆ ಬ್ಯಾಡ್ಮಿಂಟನ್‌ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದರಲ್ಲೂ ಬಲವಾದ ಸ್ಮ್ಯಾಶ್‌ ಮೂಲಕ ಧೋನಿ ಅಂಕ ಗಳಿಸಿರುವ ಚಿತ್ರಣ ಈ ವಿಡಿಯೋದಲ್ಲಿದ್ದು, ಫಿಟ್‌ ಆಗಿರುವ ಧೋನಿ ಮುಂದಿನ ಐಪಿಎಲ್‌ನಲ್ಲೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎಂದು ಅಭಿಮಾನಿಗಳು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.

Advertisement

43 ವರ್ಷದ ಧೋನಿ, ಕಳೆದ ಐಪಿಎಲ್‌ ಕೊನೇ ಕ್ಷಣದಲ್ಲಿ ಮೊಣಕಾಲು ಗಾಯದಿಂದ ಬಳಲುತ್ತಿರುವ ವಿಡಿಯೋಗಳು ಓಡಾಡಿದ್ದವು. ಆದರೆ ಈಗಿನ ವಿಡಿಯೋದಲ್ಲಿ ಧೋನಿ ಸಂಪೂರ್ಣವಾಗಿ ಫಿಟ್‌ ಆಗಿರುವಂತೆ ಕಾಣಿಸುತ್ತಿರುವುದರಿಂದ ಅಭಿಮಾನಿಗಳು, “ಮತ್ತೂಂದು ಐಪಿಎಲ್‌ ಬರುವುದರಲ್ಲಿದೆ’ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next