Advertisement

ಮಲ್ಯಾಡಿ : ಸ್ಥಳೀಯ ಯುವಕರ ತಂಡದಿಂದ 10 ಕ್ವಿಂಟಾಲ್‌ಗ‌ೂ ಅಧಿಕ ಕಾಟ್ಲಾ ಮೀನಿನ ಬೇಟೆ

09:01 PM Jul 12, 2021 | Team Udayavani |

ತೆಕ್ಕಟ್ಟೆ : ಕುಂದಾಪುರ ತಾಲೂಕಿನ ತೆಕ್ಕಟ್ಟೆ ,ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡು ಹಿಂಡಾಗಿ ಮೀನು ಸಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರ ಮೂರು ತಂಡ ಬಲೆ ಬೀಸಿ ಅಪಾರ ಪ್ರಮಾಣದ ಮೀನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಮೀನುಗಾರಿಕಾ ಸ್ಥಳದಲ್ಲಿ ಕುತೂಹಲದಿದಂದ ಅಪಾರ ಸಂಖ್ಯೆಯ ಮಂದಿ ಜಮಾಯಿಸಿರುವ ದೃಶ್ಯ ಇಂದು (ಸೋಮವಾರ, ಜುಲೈ 12) ಕಂಡು ಬಂತು.

Advertisement

ಇದನ್ನೂ ಓದಿ : SSLC ಫಲಿತಾಂಶ : ಶೇ. 99.72 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಬೃಹತ್‌ ಗಾತ್ರದ ಮೀನುಗಳು : ನಿರಂತರವಾಗಿ  ಸುರಿಯುತ್ತಿರುವ ಮಳೆಯ ಪರಿಣಾಮ ಗ್ರಾಮೀಣ ಭಾಗಗಳಿಂದ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿದೆ. ಐರ್‌, ಕಾಟ್ಲಾ , ಜಾತಿಗೆ ಸೇರಿದ ಭಾರೀ ಬೇಡಿಕೆಯ ಮೀನುಗಳು ಹಿಂಡು ಹಿಂಡಾಗಿ ಒಂದೆಡೆ ಇರುವುದನ್ನು  ಇದನ್ನೇ ಗುರಿಯಾಗಿಸಿಕೊಂಡು ಗ್ರಾಮೀಣ ಯುವಕರ ತಂಡ  ಮಲ್ಯಾಡಿ ಪರಿಸರದಲ್ಲಿ ವ್ಯಾಪಕವಾಗಿ ಬಲೆ ಬೀಸಿ ಮೀನು ಬೇಟೆಯನ್ನು ಅತ್ಯುತ್ಸಾಹದಿಂದ ಕಾರ್ಯಚರಿಸುತ್ತಿದ್ದಾರೆ.

ಮೂಟೆಗಟ್ಟಲೆ ಮೀನು ಹಿಡಿದ ಸ್ಥಳೀಯರು : ಸುಮಾರು 5ಕೆಜಿ ಗೂ ಅಧಿಕ ಭಾರದ ಕಾಟ್ಲಾ  ಜಾತಿಗೆ ಸೇರಿದ ನೂರಾರು ಮೀನುಗಳನ್ನು ಹಿಡಿದು, ಮೂಟೆಯಲ್ಲಿ ತುಂಬಿಕೊಂಡು ವಾಹನದಲ್ಲಿ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿದೆ.

ಇದನ್ನೂ ಓದಿ : ದೇಸಿಯ ತಳಿಯ ದನ ಸಾಕಾಣಿಕೆಯಲ್ಲಿ ಲಾಭ ಗಳಿಸುವುದು ಹೇಗೆ?

Advertisement
Advertisement

Udayavani is now on Telegram. Click here to join our channel and stay updated with the latest news.

Next