Advertisement

ಮೀನುಗಾರಿಕಾ ಬೋಟ್‌ಗಳಿಗೆ “ತೇಲುವ ಜೆಟ್ಟಿ’!

12:44 AM Sep 16, 2021 | Team Udayavani |

ಮಂಗಳೂರು: ಮೀನುಗಾ ರಿಕಾ ಕ್ಷೇತ್ರದಲ್ಲಿ ಹೊಸತನಗಳನ್ನು ಕಂಡುಕೊಳ್ಳುತ್ತಿರುವ ಕರಾವಳಿ ಭಾಗದಲ್ಲಿ ಇದೀಗ ಮೀನು ಗಾರಿಕೆ ದೋಣಿಗಳ ನಿಲುಗಡೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ “ತೇಲುವ ಜೆಟ್ಟಿ’ ನಿರ್ಮಿ ಸಲು ಸರಕಾರ ನಿರ್ಧರಿಸಿದೆ.

Advertisement

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ:

ನಿಗಮ (ಕೆಎಫ್‌ಡಿಸಿ)ದ ವತಿಯಿಂದ ತೇಲುವ ಜೆಟ್ಟಿ ಹೊಗೆಬಜಾರ್‌ನಲ್ಲಿ ಸಾಕಾರವಾಗಲಿದೆ. ಯೋಜನೆಗೆ 6 ಕೋ.ರೂ. ಬಿಡುಗಡೆ ಯಾಗಿದೆ. ಉಡುಪಿಯ ಮಲ್ಪೆಯಲ್ಲೂ ತೇಲುವ ಜೆಟ್ಟಿ ನಿರ್ಮಾಣಕ್ಕೆ ಅನು ಮೋದನೆ ದೊರೆತಿದ್ದು, ಹಣ ಬಿಡುಗಡೆಯ ನಿರೀಕ್ಷೆಯಲ್ಲಿದೆ.

ಮಂಗಳೂರು ಯೋಜನೆಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ಈ ಪ್ರಕ್ರಿಯೆ ಸೆ. 27ಕ್ಕೆ ಕೊನೆಗೊಳ್ಳಲಿದೆ. ಮಂಗಳೂರು ಯೋಜನೆಯನ್ನು ಇದೀಗ ಪೈಲಟ್‌ ಯೋಜನೆಯಾಗಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಅನುಷ್ಠಾನದ ಅವಲೋಕನ ಆದ ಬಳಿಕ ಮಲ್ಪೆ ಯೋಜನೆಗೆ ಅನುದಾನ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಪರಿಕಲ್ಪನೆ:

Advertisement

ತಾಂತ್ರಿಕ ಕೆಲಸಗಳನ್ನು ಐಐಟಿ ಚೆನ್ನೈಯ ತಂತ್ರಜ್ಞರು ಅಂತಿಮಗೊಳಿಸಲಿದ್ದಾರೆ. ತೇಲುವ ಜೆಟ್ಟಿ ನೀರಿನ ಮಧ್ಯಭಾಗದಲ್ಲಿರಲಿದ್ದು, ಅಲ್ಲಿಂದ ತೀರಪ್ರದೇಶಕ್ಕೆ ರೋಪ್‌ ಮೂಲಕ ರಸ್ತೆ ನಿರ್ಮಿಸಲಾಗುತ್ತದೆ. ಅದರ ಮೂಲಕ ಜೆಟ್ಟಿಗೆ ಸಣ್ಣ ಗಾತ್ರದ ವಾಹನಗಳ ಸಂಚಾರ ಸಾಧ್ಯ. ಸಣ್ಣ ದೋಣಿಗಳಲ್ಲಿ ತಂದ ಮೀನನ್ನು ತೇಲುವ ಜೆಟ್ಟಿಯಲ್ಲಿ ಅನ್‌ಲೋಡ್‌ ಮಾಡಿ ವಾಹನದ ಮೂಲಕ ದಡಕ್ಕೆ ತರಬಹುದು. ಮೀನುಗಾರಿಕಾ ವಲಯಕ್ಕೆ ಇದೊಂದು ಹೊಸ ಪರಿಕಲ್ಪನೆ ಎನ್ನುತ್ತಾರೆ ಕೆಎಫ್‌ಡಿಸಿ ಅಧ್ಯಕ್ಷ ನಿತಿನ್‌ ಕುಮಾರ್‌.

ನಾಡದೋಣಿಗೆ ಆದ್ಯತೆ:

ತೇಲುವ ಜೆಟ್ಟಿಯಲ್ಲಿ ಟ್ರಾಲ್‌ ಬೋಟ್‌, ಪರ್ಸಿನ್‌ ಬೋಟ್‌ಗಳ ಬದಲು ನಾಡದೋಣಿ ಮತ್ತು ಸಾಂಪ್ರ  ದಾಯಿಕ ದೋಣಿಗಳಿಗೆ ಆದ್ಯತೆ ನೀಡ ಲಾಗುವುದು. ದ.ಕ. ಜಿಲ್ಲೆ ಯಲ್ಲಿ 1,500ಕ್ಕೂ ಅಧಿಕ ನಾಡದೋಣಿ ಗಳಿದ್ದರೂ ತೇಲುವ ಜೆಟ್ಟಿಯ ವ್ಯಾಪ್ತಿ ಯಲ್ಲಿರುವುದು 900ರಷ್ಟು ಮಾತ್ರ. ಅವುಗಳ ನಿಲುಗಡೆ ಹಾಗೂ ಮೀನು ಅನ್‌ಲೋಡ್‌ ಮಾಡಲು ತೇಲುವ ಜೆಟ್ಟಿ ಸಹಕಾರಿ ಯಾಗಲಿದೆ ಎನ್ನುತ್ತಾರೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್‌. ದೊಡ್ಡಮನಿ.

ತೇಲುವ ಜೆಟ್ಟಿಯಿಂದ ಲಾಭವೇನು?:

ಹೊಸ ಜೆಟ್ಟಿ ನಿರ್ಮಾಣಕ್ಕೆ ಭೂಮಿಯ ಆವಶ್ಯಕತೆ ಇದ್ದು ಹಲವು ಸಮಸ್ಯೆಗಳು ಎದುರಾಗುತ್ತವೆ. ತೇಲುವ ಜೆಟ್ಟಿಗೆ ಈ ಸಮಸ್ಯೆಗಳಿಲ್ಲ. ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ನಾಡದೋಣಿ, ಸಾಂಪ್ರದಾಯಿಕ ದೋಣಿಗಳಿಗೆ ಉಪಯೋಗವಾಗಲಿದೆ. ಪ್ರಸ್ತುತ ಇರುವ ಜೆಟ್ಟಿಯಲ್ಲಿ ನೀರಿನ ಮಟ್ಟ ಏರಿಳಿತ ಆಗುವಾಗ ಬೋಟ್‌ಗಳು ಕೂಡ ಏರಿಳಿಯುವುದರಿಂದ ಮೀನು ಅನ್‌ಲೋಡಿಂಗ್‌ಗೆ ಸಮಸ್ಯೆಯಾಗುತ್ತದೆ. ತೇಲುವ ಜೆಟ್ಟಿಯಲ್ಲಿ ಈ ಸಮಸ್ಯೆಯಿಲ್ಲ. ಮೀನು ಹೇರಿಕೊಂಡು ಬರುವ ಬೋಟ್‌ಗಳು ಕೆಲವೊಮ್ಮೆ ಅನ್‌ಲೋಡ್‌ ಮಾಡಲು ದಕ್ಕೆಯಲ್ಲಿ ಸ್ಥಳ ಸಿಗದ ಕಾರಣ ಸ್ವಲ್ಪ ಕಾಲ ಕಾಯಬೇಕಾಗುತ್ತದೆ. ದೊಡ್ಡ ಬೋಟ್‌ಗಳಲ್ಲಾದರೆ ಮಂಜುಗಡ್ಡೆ ಇರುವುದರಿಂದ ಮೀನು ಕೆಡುವ ಭೀತಿ ಇಲ್ಲ. ಆದರೆ ಸಣ್ಣ ದೋಣಿಗಳಲ್ಲಿ ಮಂಜುಗಡ್ಡೆ ವ್ಯವಸ್ಥೆ ಇರುವುದಿಲ್ಲ. ಅಂತಹ ದೋಣಿಗಳಿಗೆ ಇಂತಹ ಜೆಟ್ಟಿ ಸಹಾಯಕ. ಅವಶ್ಯವಿದ್ದರೆ ತೇಲುವ ಜೆಟ್ಟಿಯನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸಲೂ ಸಾಧ್ಯ.

ತೇಲುವ ಜೆಟ್ಟಿ ಹೀಗಿರಲಿದೆ:

ನೀರಿನ ತಳಭಾಗದಲ್ಲಿ ನವೀನ ತಂತ್ರಜ್ಞಾನ ಆಧಾರಿತ ರಬ್ಬರ್‌ ಅಳವಡಿಸಿ ಮೇಲ್ಮೈಗೆ ಕಾಂಕ್ರೀಟ್‌ ತುಂಬುವ ಮೂಲಕ ಜೆಟ್ಟಿ ನಿರ್ಮಾಣವಾಗಲಿದೆ.

ಉದ್ದ    60 ಮೀಟರ್‌

ಅಗಲ   6 ಮೀಟರ್‌

ದಪ್ಪ     1 ಮೀಟರ್‌

ತೂಕ    180 ಟನ್‌

ಧಾರಣಾ ಸಾಮರ್ಥ್ಯ  360 ಟನ್‌ :

ಮಂಗಳೂರು ಮೀನುಗಾರಿಕಾ ಬಂದರನ್ನು ಸ್ಮಾರ್ಟ್‌ಸಿಟಿ ಸ್ವರೂಪದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ತೇಲುವ ಜೆಟ್ಟಿ ಯೋಜನೆಯನ್ನು ಮಂಗಳೂರಿನಲ್ಲಿ ಪೈಲಟ್‌ ಪ್ರಾಜೆಕ್ಟ್ ರೂಪದಲ್ಲಿ ಜಾರಿಗೊಳಿಸಲಾಗುತ್ತಿದೆ. ಯೋಜನೆ ಶೀಘ್ರ ಸಾಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು.ಡಿ. ವೇದವ್ಯಾಸ ಕಾಮತ್‌,  ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next