Advertisement

ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯ ಅವಧಿ ವಿಸ್ತರಣೆಗೆ ಆಗ್ರಹ

04:54 PM Jul 21, 2020 | sudhir |

ಮಲ್ಪೆ: ಮಳೆಗಾಲ ಋತುವಿನ ನಾಡದೋಣಿ ಮೀನುಗಾರಿಕೆಯ ಅವಧಿಯನ್ನು ವಿಸ್ತರಿಸುವಂತೆ ಮಲ್ಪೆ ಸಾಂಪ್ರಾದಾಯಿಕ ನಾಡದೋಣಿ ಸಂಘ, ನಾಡಟ್ರಾಲ್‌ದೋಣಿ ಸಂಘ, ಸಾಂಪ್ರಾದಾಯಿಕ ಕಂತು ಬಲೆ ದೋಣಿ ಸಂಘವು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಮೀನುಗಾರಿಕಾ ಜಂಟಿ ನಿರ್ದೇಶಕ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರರ ಸಂಘ ಮತ್ತು ಆಳಸಮುದ್ರ ತಾಂಡೇಲರ ಸಂಘಕ್ಕೆ ಮನವಿ ನೀಡಿ ಆಗ್ರಹಿಸಿದೆ.

Advertisement

ಸುಮಾರು 35 ವರ್ಷಗಳಿಂದಲೂ ಮಳೆಗಾಲ ಋತುವಿನ ಮೀನುಗಾರಿಕೆಗೆ ಮೂರು ತಿಂಗಳ ಅವಧಿಯನ್ನು ನೀಡಲಾಗುತ್ತಿದ್ದು, ಪ್ರಸ್ತುತ 3 ವರ್ಷದಿಂದ ಅದನ್ನು 2 ತಿಂಗಳಿಗೆ ಕುಂಠಿತಗೊಳಿಸಲಾಗಿದೆ. ಮಳೆಗಾಳಿ, ಪ್ರಾಕೃತಿಕ ವೈಪರೀತ್ಯಾಗಳು ಸಂಭವಿಸುವುದರಿಂದ ಈ ಎರಡು ತಿಂಗಳ ಅವಧಿಯಲ್ಲಿ ಮೀನುಗಾರಿಕೆ ನಡೆಸಲು ಹೆಚ್ಚು ದಿನ ಸಿಗುತ್ತಿಲ್ಲ. ಪ್ರಸ್ತುತ ಈ ಋತುವಿನಲ್ಲಿ ಇದುವರೆಗೂ ಯಾವುದೇ ರೀತಿಯ ಮೀನುಗಾರಿಕೆಯಲ್ಲಿ ಸಂಪಾದನೆ ಆಗಿಲ್ಲ. ಈ ಮೂರು ಸಂಘದ ಅಡಿಯಲ್ಲಿ ಸುಮಾರು 5 ಸಾವಿರ ಮೀನುಗಾರರು ಇದ್ದಾರೆ. ಇದೀಗ ಈ ಎಲ್ಲ ಮೀನುಗಾರರ ಕುಟುಂಬದ ಜೀವನ ನಿರ್ವಾಹಣೆ ಕಷ್ಟದಾಯಕವಾಗಿದೆ. ಆದ್ದರಿಂದ ತಾವು ಈ ಮಳೆಗಾಲದ ಋತುವಿನಲ್ಲಿ ನಾಡದೋಣಿ ಮೀನುಗಾರಿಕೆಗೆ ಹಿಂದಿನಂತೆ ಆ. 30ರವರೆಗೆ ಅವಧಿಯನ್ನು ವಿಸ್ತರಿಸಬೇಕು ಮತ್ತು ಯಾಂತ್ರಿಕ ಮೀನುಗಾರಿಕೆಗೆ ಸೆ. 1ರಿಂದ ಅವಕಾಶವನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ನಾಡದೋಣಿ ಅಧ್ಯಕ್ಷ ಜನಾರ್ದನ ತಿಂಗಳಾಯ, ಟ್ರಾಲ್‌ದೋಣಿ ಅಧ್ಯಕ್ಷ ದೇವದಾಸ್‌ ಕುಂದರ್‌, ಉಪಾಧ್ಯಕ್ಷ ಮಧುಸೂದನ್‌ ಮೈಂದನ್‌, ಕಾರ್ಯದರ್ಶಿ ಪುರಂದರ್‌ ಕೋಟ್ಯಾನ್‌, ಕೋಶಾಧಿಕಾರಿ ಆನಂದ ಕಾಂಚನ್‌, ಕಂತುಬಲೆ ದೋಣಿ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಸದಸ್ಯರಾದ ಗಣಪ ಕೋಡಿ, ಕರುಣಾಕರ್‌ ಮೆಂಡನ್‌, ವಿನೋದ್‌ ಕುಂದರ್‌, ತಾರಾನಾಥ್‌ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next