Advertisement

ಬೆಳ್ತಂಗಡಿ: ಐತಿಹಾಸಿಕ ಗುರುವಾಯನಕೆರೆಯಲ್ಲಿ ಮೀನುಗಳ ಮಾರಣಹೋಮ

11:14 AM Mar 14, 2022 | Team Udayavani |

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿರುವುದು ಬೆಳಕಿಗೆ ಬಂದಿದೆ.

Advertisement

ಸುಮಾರು ಮೂರು ಎಕ್ರೆಗೂ ಅಧಿಕವಿರುವ ಗುರುವಯ್ಯನ ಕೆರೆ ಎಂದೇ ಪ್ರಸಿದ್ಧವಾಗಿರುವ ಗುರುವಾಯನಕೆರೆಯಲ್ಲಿ ವಿಷ ಪ್ರಾಶನ ಅಥವಾ ಕೆಮಿಕಲ್ ರಿಯಾಕ್ಷನ್ ಆಗಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ.

ಕಳೆದ ಒಂದೆರಡು ವಾರಗಳಿಂದ ಕೆರೆ ನೀರಿನ ಬಣ್ಣ ಬದಲಾಗಿರುವ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಿನ್ನೆಯಿಂದ ಸಣ್ಣಪುಟ್ಟ ಮೀನುಗಳು ಕೆರೆ ದಡದಲ್ಲಿ ಪ್ರಾಣಕಳೆದುಕೊಂಡು ತೇಲಾಡುತ್ತಿವೆ.

ಸರ್ವೇ ನಂ 15/ 1 ರಲ್ಲಿ 14.71 ಎಕ್ರೆ ವಿಸ್ತೀರ್ಣದ ಕೆರೆಯಾಗಿದ್ದು ಲಕ್ಷಾನು ಮೀನುಗಳು ಇಲ್ಲಿ ಆಶ್ರಯಪಡೆದಿವೆ. ಬಹು ಅಪರೂಪದ ಮೀನುಗಳು ಕೆರೆಯಲ್ಲಿದ್ದು ವಿಷಪೂರಿತ ನೀರಿನಿಂದ ಎಲ್ಲ ಮೀನುಗಳ ಮಾರಣಹೋಮವಾಗಲಿದೆ.

Advertisement

ಈಗಾಗಲೆ ಕುವೆಟ್ಟು ಗ್ರಾ.ಪಂ. ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ನೀರಿನ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿದೆ.

ಇಷ್ಟು ದೊಡ್ಡ ಕೆರೆಗೆ ಯಾವ ಪ್ರಮಾಣದಲ್ಲಿ ಕಿಡಿಗೇಡಿಗಳು ವಿಷ ಪ್ರಾಶನ ಮಾಡಿದ್ದಾರೆ ಅಥವಾ ಬೇರಾವುದಾದರು ರೂಪದಲ್ಲಿ ನದಿಗೆ ವಿಷಯುಕ್ತ ನೀರು ಸೇರಿದ್ದರಿಂದ ಈ ಪ್ರಮಾಣದಲ್ಲಿ ಮೀನುಗಳು ಸಾವನಗನಪ್ಪಿದೆಯೇ ಎಂಬುದರ ಕುರಿತು ತನಿಖೆ ನಡೆಯಬೇಕಿದೆ.

ಕಳೆದಹತ್ತಾರು ವರ್ಷಗಳ ಹಿಂದೆ ಇತಿಹಾಸ ಪ್ರಸಿದ್ಧ ಶಿಶಿಲೇಶ್ವರ ಮತ್ಸಕ್ಷೇತ್ರದಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ತಾಲೂಕಿನಲ್ಲಿ ಮತ್ತೊಂದು ನಿಕೃಷ್ಟ ಘಟನೆ ನಡೆಯಿತೇ ಎಂಬ ಆತಂಕ ಉಂಟಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಮಹೇಶ್ ಜೆ. ಭೇಟಿ ನೀಡಿ, ಸಾರ್ವಜನಿಕರು ಸತ್ತ ಮೀನುಗಳನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರು ಮೀನು ಸಂಗ್ರಹಿಸದಂತೆ ತಹಶೀಲ್ದಾರ್ ಮಹೇಶ್ ಜೆ. ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next