Advertisement

ಎಡದಂಡೆ ಕಾಲುವೆಯಲ್ಲಿ ಮೀನುಗಳ ಮಾರಣಹೋಮ

08:03 PM Apr 26, 2021 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯಲ್ಲಿ ಹಿಟ್ನಾಳ-ಶಿವಪುರ ಮಧ್ಯದಲ್ಲಿನ ಕಾಲುವೆಯಲ್ಲಿ ಲಕ್ಷಾಂತರ ಮೀನುಗಳು ಮೃತಪಟ್ಟಿದ್ದು, ಜನರು ಆತಂಕಗೊಂಡಿದ್ದಾರೆ.

Advertisement

ರಾಯಚೂರು ಭಾಗಕ್ಕೆ ಇದೇ ಕಾಲುವೆಯ ಮೂಲಕವೇ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಆಗಿದ್ದು, ನೀರಾವರಿ ಇಲಾಖೆ ಅಧಿ ಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಈಚೆಗೆ ಎಡದಂಡೆ ಕಾಲುವೆಯ ಮೂಲಕವೇ ರಾಯಚೂರು ಸೇರಿದಂತೆ ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಪೂರೈಕೆ ಮಾಡಲಾಗಿದೆ.

ಕಾಲುವೆಯ ಎಡ ಹಾಗೂ ಬಲ ಭಾಗದಲ್ಲಿ ಜಿಲ್ಲಾಡಳಿತ ಸಹ 144 ಕಲಂ ನಿಷೇಧಾಜ್ಞೆ ಜಾರಿಗೊಳಿಸಿದೆ. ಆದರೆ ಕಾಲುವೆಯಲ್ಲಿ ಕೆಲ ದಿನದಿಂದ ಮೀನುಗಳ ಸಾವು ಹೆಚ್ಚಾಗುತ್ತಿದೆ. ಒಂದೆರಡು ಮೀನುಗಳ ಸತ್ತರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಲಕ್ಷಾಂತರ ಮೀನುಗಳು ಏಕಕಾಲಕ್ಕೆ ಮೃತಪಟ್ಟಿವೆ.

ತಾಲೂಕಿನ ಹಿಟ್ನಾಳದಿಂದ ಶಿವಪೂರವರೆಗೂ ಕಾಲುವೆಯಲ್ಲಿ ಎಲ್ಲಿ ನೋಡಿದರಲ್ಲಿ ಸತ್ತ ಮೀನುಗಳು ಕಣ್ಣಿಗೆ ಗೋಚರವಾಗುತ್ತಿವೆ. ಪ್ರಸ್ತುತ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿದ್ದು, ಇದೇ ನೀರಿನಲ್ಲಿಯೇ ಸತ್ತ ಮೀನುಗಳು ತೇಲಿ ಬರುತ್ತಿವೆ. ಕೆಲವೆಡೆ ದಂಡೆಯ ಪಕ್ಕದಲ್ಲಿಯೇ ಬಿದ್ದಿವೆ. ಇವುಗಳನ್ನು ಯಾರೂ ತೆಗೆದು ಹಾಕಿಲ್ಲ. ಎಡದಂಡೆ ಕಾಲುವೆಯ ನೀರನ್ನೇ ಹಿಟ್ನಾಳ ಸೇರಿದಂತೆ ಇತರೆ ಭಾಗದ ಜನರು ಕುಡಿಯಲು ಹಾಗೂ ಕೃಷಿಗೆ ಬಳಕೆ ಮಾಡುತ್ತಿದ್ದಾರೆ.

ನೀರಿನಲ್ಲಿ ವಿಷಯುಕ್ತ ಅಂಶವು ಮಿಶ್ರಣವಾಗಿ ಮೀನುಗಳ ಸಾವು ಸಂಭವಿಸಿದೆ ಎನ್ನುವ ಅನುಮಾನ ಮೂಡುತ್ತಿದೆ. ಇಲ್ಲವೇ ಜಲಾಶಯದ ನೀರಿನ ಹಿಂಭಾಗದಲ್ಲಿ ಕೈಗಾರಿಕೆಗಳ ಅತಿಯಾದ ಕಲ್ಮಶದಿಂದ ಈ ಅವಘಡ ಸಂಭವಿಸಿದೆಯೇ ಎನ್ನುವುದು ನಿಖರವಾಗಿ ಗೊತ್ತಾಗುತ್ತಿಲ್ಲ. ಕಾಲುವೆಯಲ್ಲಿ ಮೀನುಗಳ ಸಾವು ಜನರಲ್ಲಿ ಆತಂಕ ಮೂಡಿಸಿದೆ. ಮೀನುಗಳು ಸತ್ತು ದುರ್ನಾತ ಬೀರುತ್ತಿದೆ. ಈ ಬಗ್ಗೆ ನೀರಾವರಿ ಇಲಾಖೆಯ ಅಧಿ ಕಾರಿಗಳು ಗಮನಹರಿಸುವುದು ಅಗತ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next