Advertisement

ಮೀನುಗಾರ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌: ಆಗ್ರಹ

01:12 AM Apr 02, 2023 | Team Udayavani |

ಮಂಗಳೂರು: ಕರಾವಳಿಯ ಮೀನುಗಾರರು 70 ವರ್ಷಗಳಿಂದ ಶೇ. 80ರಷ್ಟು ಮತವನ್ನು ಬಿಜೆಪಿಗೆ ಚಲಾಯಿಸುತ್ತ ಬಂದಿದ್ದರೂ ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಮಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಮೀನುಗಾರ ಅಭ್ಯರ್ಥಿಗೆ ಟಿಕೆಟ್‌ ದೊರೆ ಯುವವರೆಗೆ ಹೋರಾಟ ಮುಂದು ವರಿಯಲಿದೆ ಎಂದು ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸದಸ್ಯ ರಾಮ ಚಂದರ್‌ ಬೈಕಂಪಾಡಿ ಹೇಳಿದರು.

Advertisement

ಮಂಗಳೂರು ಉತ್ತರ, ಉಳ್ಳಾಲದಲ್ಲಿ ಮೀನುಗಾರ ಸಮಾಜದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕೆಂದು ಪಕ್ಷದ ರಾ.ಅಧ್ಯಕ್ಷ ಜೆ.ಪಿ. ನಡ್ಡಾ, ನಳಿನ್‌ ಕುಮಾರ್‌ ಕಟೀಲು ಅವರಿಗೆ ಸಮುದಾಯದ ಮನವಿ ಇದಾಗಿದ್ದು, ಮುಖ್ಯಮಂತ್ರಿ ಈಗಾಗಲೇ ಭರವಸೆ ನೀಡಿದ್ದಾರೆ. ಮಂಗಳೂರು ಉತ್ತರದಲ್ಲಿ ಮೀನುಗಾರ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಲೇಬೇಕು. ಈ ಕ್ಷೇತ್ರವನ್ನು ಸಮುದಾಯಕ್ಕೆ ನೀಡಿದರೆ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲು ಕಾರಣರಾಗಲಿದ್ದೇವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬಾಬು ಬಂಗೇರ, ಮುರಳಿ ರಾಜ್‌ ಉಚ್ಚಿಲ್‌, ಸುಕೇಶ್‌ ಉಚ್ಚಿಲ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next