ಉಡುಪಿ: ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಶುಲ್ಕ ವಸೂಲಿಗೆ ಇಲಾಖೆಯ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಮೀನುಗಾರರ ಸಂಕಷ್ಟ ಪರಿಹಾರ ನಿಧಿಗೆ ಅನುದಾನ ಸಂಗ್ರಹಿಸಲು ಸರಕಾರವು ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ನಿಗದಿಪಡಿ ಸುವ ರಾಜ್ಯ ಮಾರಾಟ ಕರ ದರದ ಶೇ. 1.5ರ ಮೊತ್ತವನ್ನು ಡೀಸೆಲ್ ವಿತರಣೆ ಸಮಯದಲ್ಲಿ ಪ್ರತಿ ದೋಣಿಗೆ ನಿಗದಿಪಡಿಸಿರುವ ಡೀಸೆಲ್ ಪ್ರಮಾಣಕ್ಕೆ ಅನುಗುಣ ವಾಗಿ ಮೀನುಗಾರಿಕೆ ದೋಣಿ ಮಾಲಕ ರಿಂದ ಮೀನು ಗಾರರ ಸಂಕಷ್ಟ ಪರಿಹಾರ ನಿಧಿಯ ಶುಲ್ಕದ ವಸೂ ಲಾತಿಯನ್ನು ತತ್‌ಕ್ಷಣ ಪ್ರಾರಂಭಿಸಿ, ಆ ಮೊತ್ತವನ್ನು ಡೀಸೆಲ್ ಬಂಕ್ ಮಾಲಕರು ಮೀನುಗಾರರ ಸಂಕಷ್ಟ ಪರಿಹಾರ ನಿಧಿಗಾಗಿ ರಾಜ್ಯ ಮೀನು ಗಾರಿಕೆ ನಿರ್ದೇಶಕರ ಹೆಸರಿನ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.