Advertisement

Malpe ಬೋಟಿನಲ್ಲಿ ಎದೆನೋವು ಕಾಣಿಸಿಕೊಂಡು ಮೀನುಗಾರ ಸಾವು

09:48 PM Feb 12, 2024 | Team Udayavani |

ಮಲ್ಪೆ: ಮೀನುಗಾರಿಕೆಗೆ ತೆರಳಿದ ಮೀನುಗಾರನೊರ್ವರಿಗೆ ಸಮುದ್ರ ಮಧ್ಯೆ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

Advertisement

ಕೇರಳ ರಾಜ್ಯದ ಮ್ಯಾಥೀವ್‌ (52) ಸಾವನ್ನಪ್ಪಿದ್ದು, ಅವರು ಮಹಾಲಕ್ಷ್ಮೀ ಬೋಟಿನಲ್ಲಿ ಕಲಾಸಿಯಾಗಿ ದುಡಿಯುತ್ತಿದ್ದರು.

ಫೆ. 10ರಂದು ಮೀನುಗಾರಿಕೆಗೆ ತೆರಳಿದ್ದ ಅವರಯ ಫೆ. 12ರಂದು ಮಧ್ಯಾಹ್ನ ಸಮುದ್ರದಲ್ಲಿ 27 ನಾಟಿಕಲ್‌ ದೂರು ಮೀನುಗಾರಿಕೆ ನಡೆಸಲು ಬಲೆಯ ಕೆಲಸ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡು ಅಲ್ಲಿಯೆಊ ಕುಸಿದು ಬಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು ವಾಪಾಸು ಮಲ್ಪೆ ಬಂದರಿಗೆ ಕರೆದುಕೊಂಡು ಬರಲಾಗಿದ್ದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮ್ಯಾಥೀವ್‌ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next