Advertisement
ಕರ್ನಾಟಕ ಪಶು ಸಂಗೋಪನಾ ಹಾಗೂ ಪಶುಪಾಲನಾ, ಮೀನುಗಾರಿಕೆ ವಿಶ್ವವಿದ್ಯಾಲಯದ ಭೂತನಾಳ ಮೀನುಗಾರಿಕೆ ಸಂಶೋಧನೆ ಹಾಗೂ ಮಾಹಿತಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊಳಗಳಲ್ಲಿ ತೀವ್ರ ಸಾಂದ್ರತೆಯ ಮೀನು ಕೃಷಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಎಕರೆ ಕೊಳದಲ್ಲಿ ಉತ್ಪಾದಿಸುವ ಮೀನನ್ನು ವಿಯಟ್ನಾಂ ಎಂಬ ಪುಟ್ಟ ದೇಶದಲ್ಲಿ ಇದರ 15 ಪಟ್ಟು ಮೀನು ಉತ್ಪಾದಿಸಲಾಗುತ್ತಿದೆ. ಸಿಂಗಲೂರ ಎಂಬ ಪುಟ್ಟ ದ್ವೀಪರಾಷ್ಟ್ರ ಕೇವಲ ಅಲಂಕಾರಿಕ ಮೀನುಗಾರಿಕೆಯಿಂದಲೇ ವಾರ್ಷಿಕ 120 ಕೋಟಿ ರೂ. ಲಾಭ ಗಳಿಸುತ್ತಿದೆ ಎಂದರೆ ಆ ದೇಶದ ಮೀನಿನ ಇತರೆ ಉತ್ಪನ್ನಗಳ ಕುರಿತು ಅಂದಾಜಾಗುತ್ತದೆ ಎಂದರು. ವಾತಾವರಣ, ನೀರಿನ ಗುಣಮಟ್ಟ, ಪರಿಸರ, ಪರಿಸ್ಥಿತಿ, ನಿರ್ವಹಣಾ ಕ್ರಮಗಳು ಭಾರತೀಯ ಮೀನು ಉತ್ಪಾದನೆಯಲ್ಲಿ ಪ್ರಮುಖ ಕಾರಣವಾಗಿದ್ದರೂ, ಆಧುನಿಕ ತಾಂತ್ರಿಕತೆಯ ವೈಜ್ಞಾನಿಕ ಕ್ರಮ ಇಲ್ಲಿ ಪ್ರಮುಖವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಇರುವ ಕೃಷಿ ಹೊಂಡ, ನೀರಿನ ಕೊಳಗಳಲ್ಲೂ ಮೀನುಗಾರಿಕೆ ಮಾಡಿ ಹೆಚ್ಚಿನ ಶ್ರಮ ಹಾಗೂ ವೆಚ್ಚ ಇಲ್ಲದೇ ಕೃಷಿ ಪೂರಕ ಆದಾಯ ಗಳಿಸಲು ನೆರವಾಗಲಿದೆ.
Related Articles
ಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ಪಶುವಿಭಾಗದ ಡಾ| ಮಹೇಶ ಕಟಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೀನುಗಾರಿಕೆ ತರಬೇತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ| ವಿಜಯ ಅತನೂರು, ಜಿ.ಎಸ್. ಕಮತರ ವೇದಿಕೆಯಲ್ಲಿದ್ದರು. ಇದೇ ವೇಳೆ ವಿಜಯಪುರ-ಬಾಗಲಕೋಟೆ ರೈತರಿಗೆ ಮೀನು ಮರಿಗಳನ್ನು ವಿತರಿಸಲಾಯಿತು.
Advertisement